ದೈವಾರಾಧನೆ ತುಳುನಾಡ ಜೀವಾಳ: ಗಣನಾಥ್ ಎಕ್ಕಾರ್

ಮಲ್ಪೆ: ತುಳುನಾಡಿನ ಸಂಸ್ಕೃತಿ ಅಥವಾ ಧಾರ್ಮಿಕ ವ್ಯವಸ್ಥೆಯ ಮೂಲ ಕೇಂದ್ರ ದೈವರಾಧನೆ. ಇದರ ಮೂಲ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಮಗೆ ದೈವಾರಾಧನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಜಾನಪದ ವಿದ್ವಾಂಸ ಡಾ. ಗಣನಾಥ್ ಎಕ್ಕಾರ್ ನುಡಿದರು. 

ಕಲ್ಮಾಡಿ ಬಗ್ಗುಮುಂಡ ಶ್ರೀನಾಗ-ಸಪರಿವಾರ ಬಗ್ಗು ಪಂಜುರ್ಲಿ ದೈವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ, ಬಗ್ಗು ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಶನಿವಾರ ಮಾತನಾಡಿದರು. ತುಳುನಾಡಿನ ಆಚರಣೆಗಳು ಸ್ಥಿತ್ಯಂತರವಾಗುತ್ತಿದೆ. ನಮ್ಮ ಸಂಸ್ಕೃತಿ ನಮ್ಮ ಪರಿಸರವನ್ನು ಉಳಿಸಬೇಕಾಗಿದೆ. ಸಂಸ್ಕೃತಿಯ ನೋಡುಗರು ಮಾತ್ರವಾಗದೇ ಆಚರಿಸುವವರಾಗಬೇಕು ಎಂದರು. 

ಕಲ್ಮಾಡಿ ಬ್ರಹ್ಮ ಬೈದೇರುಗಳ ಗರೋಡಿ ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ್ ಅಮೀನ್ ಕಲ್ಮಾಡಿ ಅಧ್ಯಕ್ಷತೆ ವಹಿಸಿದರು. ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಮೋಕ್ತೆಸರ ಟಿ. ರಾಘವೇಂದ್ರ ರಾವ್, ನಗರಸಭೆ ಸದಸ್ಯ ನಾರಾಯಣ ಪಿ. ಕುಂದರ್, ಲಯನ್ಸ್ ನಿಕಟಪೂರ್ವ ಜಿಲ್ಲಾ ಸಂಯೋಜಕಿ ವಿಜಯ ಜಿ. ಬಂಗೇರ, ಹಿರಿಯ ರಂಗ ಕಲಾವಿದ ಸಂಜೀವ ಜಿ. ಸಾಲಿಯಾನ್, ಆಡಳಿತ ಮಂಡಳಿ ಅಧ್ಯಕ್ಷ ಸಾಧು ಸಾಲಿಯಾನ್, ಬಗ್ಗುಮನೆ ಚಂದ್ರಶೇಖರ್, ಪ್ರೇಮನಾಥ್ ಕಲ್ಮಾಡಿ, ಸೀಮಾ ಕ್ರಿಕೆಟರ್ಸ್‌ ಅಧ್ಯಕ್ಷ ಅನಿಲ್ ಕುಮಾರ್ ಉಪಸ್ಥಿತರಿದ್ದರು. 

ಈ ಸಂದರ್ಭ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಾನಾ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಾದ ಸಂಜೀವ ಜಿ. ಸಾಲಿಯಾನ್, ಕಲ್ಮಾಡಿ ಶೇಖರ್ ಪೂಜಾರಿ, ಸೂರಿ ಶೆಟ್ಟಿ, ಆನಂದ ಪಿ. ಸುವರ್ಣ, ನಾರಾಯಣ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಮನೋಜ್ ಕಲ್ಮಾಡಿ ಸ್ವಾಗತಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ್ ಕಲ್ಮಾಡಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com