ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ ಸಾಮೂಹಿಕ ವಿವಾಹ ನೋಂದಣಿ

ಕುಂದಾಪುರ : ಸಮಾಜದಲ್ಲಿ ನಡೆಯುವ ವಿವಾಹ ಸಮಾರಂಭಗಳಲ್ಲಿ ಹೆಚ್ಚುತ್ತಿರುವ ದುಂದುವೆಚ್ಚ ಮತ್ತು ಆಡಂಬರಗಳಿಗೆ ಕಡಿವಾಣ ಹಾಕಿ ವಿವಾಹ ಪದ್ಧತಿ ಸರಳಗೊಳಿಸುವ ನಿಟ್ಟಿನಲ್ಲಿ ಕುಂದಾಪುರದ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ನಾಲ್ಕನೇ ವರ್ಷದ ಸಾಮೂಹಿಕ ವಿವಾಹ ಮೇ 25ರಂದು ರವಿವಾರ ಕುಂದಾಪುರ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.

ಈ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲು ಇಚ್ಛಿಸುವ ವರನಿಗೆ ಧೋತಿ, ಶಾಲು, ಪೇಟ, ಹೂವಿನ ಮಾಲೆ ಹಾಗೂ ವಧುವಿಗೆ ಧಾರೆಸೀರೆ, ರವಕೆ ಕಣ, ಮಂಗಳಸೂತ್ರ, ಬಾಸಿಂಗ, ಹೂವಿನ ಮಾಲೆಯನ್ನು ಸಂಘದ ವತಿಯಿಂದ ಒದಗಿಸಲಾಗುವುದು. ಸಮಾರಂಭಕ್ಕೆ ಆಗಮಿಸುವ ವಧು - ವರರ ಕಡೆಯವರಿಗೆ ಸಂಘದ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಗುವುದು.

ಸಂಘದ ಗೌರವಾಧ್ಯಕ್ಷ ಸುರೇಶ್‌ ಎಸ್‌. ಪೂಜಾರಿ, ಅಧ್ಯಕ್ಷ ನಾರಾಯಣ ಟಿ. ಪೂಜಾರಿ ಹಾಗೂ ಸರ್ವ ಸದಸ್ಯರ ಮುಂದಾಳತ್ವದಲ್ಲಿ ವಿವಾಹ ಸಮಾರಂಭ ಜರಗಲಿದೆ. ವಿವಾಹವಾಗುವ ವಧು - ವರರ ಹೆಸರನ್ನು ಮೇ 10ರ ಶನಿವಾರದ ಒಳಗಡೆ ನೋಂದಣಿ ಮಾಡಬಹುದು.

ಹೆಚ್ಚಿನ ವಿವರಗಳಿಗೆ ದೂ. 08254-231755ನ್ನು ಸಂಪರ್ಕಿಸಬಹುದು ಎಂದು ಸಂಘದ ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com