ಕುಂದಾಪುರ ಕ್ಷೇತ್ರದಲ್ಲಿ ಹೆಗ್ಡೆ ಪ್ರವಾಸ

ಕುಂದಾಪುರ : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆಯವರು ಶುಕ್ರವಾರ ಕುಂದಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ಬಿರುಸಿನ ಪ್ರವಾಸ ಮಾಡಿದರು.

ಕಳೆದ 1 ವರ್ಷ 10 ತಿಂಗಳ ಅವಧಿಗೆ ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದ ನಿಮಗೆಲ್ಲರಿಗೂ ಕೃತಜ°ತೆಯನ್ನು ಸಲ್ಲಿಸುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ನನಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದೆ. ಸಂಸದನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ನನಗೆ ದೊರೆತ ಅಲ್ಪಾವಧಿಯಲ್ಲಿ ನಿಮ್ಮೆಲ್ಲರ ಧ್ವನಿಯಾಗಿ ಸಂಸತ್ತಿನಲ್ಲಿ ಸ್ಪಂದಿಸಿದ್ದೇನೆ.

ಅಲ್ಪಾವಧಿಯಲ್ಲಿ ಒಟ್ಟು 10 ಕೋ.ರೂ. ಪ್ರದೇಶಾಭಿವೃದ್ಧಿ ನಿಧಿಯನ್ನು ಸಧºಳಕೆ ಮಾಡಿದ್ದೇನೆ. ಚುನಾವಣೆಯ ಪ್ರಯುಕ್ತ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ಗ್ರಾಮಕ್ಕೆ ಭೇಟಿ ಮಾಡುವ ಇಚ್ಛೆ ಇದ್ದರೂ ಕಷ್ಟಸಾಧ್ಯ ಎಂದು ಹೆಗ್ಡೆಯವರು ಮಡಾಮಕ್ಕಿ, ಆರ್ಡಿ, ರಟ್ಟಾಡಿ, ಉಪ್ಪಿನಕೋಟೆಗಳಲ್ಲಿ ಮತಯಾಚನೆ ಮಾಡಿದ ಸಂದರ್ಭ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com