ರೋಟರಿ ಸರಕಾರಕ್ಕಿಂತ ಬಲಿಷ್ಠ: ಎ.ಎಸ್.ಎನ್. ಹೆಬ್ಬಾರ್

ಕೋಟ: ರೋಟರಿ ಸಂಸ್ಥೆ ಎಂಬುದು ರಾಜ್ಯ ಸರಕಾರಕ್ಕಿಂತ ಬಲಿಷ್ಠವಾದುದು. ಯಾವುದೇ ಸರ್ಕಾರದಿಂದ ಮಾಡಲಾಗದ ಕೆಲಸವನ್ನು ರೋಟರಿ ಸಂಸ್ಥೆ ಮಾಡಬಲ್ಲದು. ರೋಟರಿ ಎಂಬುದು ನಿಂತ ನೀರಲ್ಲ. ರೋಟರಿಯನ್ನು ಸೇರದವರು ಏನನ್ನೊ ಕಳೆದುಕೊಂಡಂತೆ ಎಲ್ಲಕ್ಕಿಂತ ಹೆಚ್ಚಾಗಿ ಸ್ನೇಹಿತರನ್ನು ಕಳೆದುಕೊಂಡಂತೆ ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ ರೋಟರಿ ಶತಾಬ್ಧಿ ಜಿಲ್ಲಾ ಗವರ್ನರ್ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಅವರು ಶನಿವಾರ ಚಿತ್ರಪಾಡಿ ಅಘೋರೇಶ್ವರ ಸಭಾಭವನದಲ್ಲಿ ರೋಟರಿ ಕ್ಲಬ್ ಮಣೂರು ಆಶ್ರಯದಲ್ಲಿ ಜರುಗಿದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಈ ಹಿಂದೆ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮದ ಸದಸ್ಯರುಗಳಾಗಿದ್ದ ವಲಯ 1ರ ಮಾಜಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಶೆಟ್ಟಿ, ಮಾಜಿ ವಲಯ ಸೇನಾನಿ ಚಂದ್ರಶೇಖರ್ ಮೆಂಡನ್, ಮಾಜಿ ಅಧ್ಯಕ್ಷ ಶ್ಯಾಮಸುಂದರ ನ್ಯಾರಿ, ಮಾಜಿ ಕಾರ್ಯದರ್ಶಿಗಳಾದ ಸುರೇಶ ಆಚಾರ್, ರಾಧಾಕೃಷ್ಣ, ಮಾಜಿ ಕೋಶಾಧಿಕಾರಿ ಉದಯ್ ಕುಮಾರ್ ಹೆಗ್ಡೆ ಈ ಸಂದರ್ಭ ಮಣೂರು ರೋಟರಿಗೆ ಸೇರ್ಪಡೆಗೊಂಡರು. 

ಅತಿಥಿಯಾಗಿ ಆಗಮಿಸಿದ್ದ ಏಕದಂತ ಎಂಟರ್‌ಪ್ರೈಸ್‌ನ ಮಾಲಕ ಚಂದ್ರಶೇಖರ ಕಾರಂತ ಶುಭಾಶಂಸನೆ ಮಾಡಿದರು. ಇದೇ ಸಂದರ್ಭ ಮುಂದಿನ ರೋಟರಿ ವರ್ಷಕ್ಕೆ ಅಧ್ಯಕ್ಷರನ್ನಾಗಿ ಶಾನಾಡಿ ಉದ ಕುಮಾರ್ ಹೆಗ್ಡೆ, ಕಾರ್ಯದರ್ಶಿಯಾಗಿ ಪ್ರಕಾಶ ಹಂದಟ್ಟು ಇವರನ್ನು ಆಯ್ಕೆ ಮಾಡಲಾಯಿತು. ಕ್ಲಬ್‌ನ ಅಧ್ಯಕ್ಷ ಅರುಣ ಕುಂದರ್ ಕಲ್ಗದ್ದೆ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಹಂದಟ್ಟು ವಂದಿಸಿದರು. ಕ್ಲಬ್‌ನ ಜಿಎಸ್‌ಆರ್ ಜೈಕಿಶನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com