ಚುನಾವಣೆ ವೆಚ್ಚ: ವೀಕ್ಷಕರ ನೇಮಕ

ಉಡುಪಿ: ಲೋಕಸಭೆ ಚುನಾವಣೆಗೆ ರ್ಸ್ಪಸುವ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಲು ರಂಜನಾ ಝಾ ಅವರನ್ನು ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ವೆಚ್ಚ ವೀಕ್ಷಕರನ್ನಾಗಿ ಚುನಾವಣೆ ಆಯೋಗ ನಿಯೋಜಿಸಿದೆ. 

ಚುನಾವಣಾ ವೆಚ್ಚ ವೀಕ್ಷಕರು ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರ ಸಂದರ್ಶಿಸಲಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಾಡುವ ವೆಚ್ಚಗಳ ಕುರಿತು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ಸಾರ್ವಜನಿಕರು ಮೊಬೈಲ್ ಸಂಖ್ಯೆ: 9481754925 ಮೂಲಕ ದೂರು ಸಲ್ಲಿಸಬಹುದು ಅಥವಾ ಚುನಾವಣಾ ವೀಕ್ಷಕರ ಕಚೇರಿಯು ಪ್ರವಾಸಿ ಮಂದಿರ, ಬನ್ನಂಜೆ ಉಡುಪಿ (ಫೋನ್: 0820 2530080) ಇಲ್ಲಿ ಪ್ರಾರಂಭವಾಗಿದ್ದು, ಕಚೇರಿಯಲ್ಲಿ ಕೂಡ ದೂರು ಸಲ್ಲಿಸಬಹುದು ಎಂದು ಸಹಾಯಕ ಚುನಾವಣಾಧಿಕಾರಿ ಕುಮಾರ್ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com