ಅತಿ ಹೆಚ್ಚು ಮತಗಳ ಅಂತರದಿಂದ ಹೆಗ್ಡೆ ಗೆಲುವು ಎಂ.ಎನ್‌. ರಾಜೇಂದ್ರ ಕುಮಾರ್‌

ಕುಂದಾಪುರ: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಅಧಿಕಾರವಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಶಾಸಕರಿದ್ದ ಕುಂದಾಪುರದಲ್ಲಿ ಪಕ್ಷೇತರ ಶಾಸಕರಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸೋತರೂ ಗೆದ್ದರೂ ಕ್ಷೇತ್ರ ಬದಲಾವಣೆ ಮಾಡದ ಸರಳ - ಸಜ್ಜನ ಕೆ. ಜಯಪ್ರಕಾಶ ಹೆಗ್ಡೆಯವರ ನಡೆ - ನುಡಿಯನ್ನು ಪûಾತೀತವಾಗಿ ಜನ ಮೆಚ್ಚಿಕೊಂಡಿರುವುದರಿಂದ ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಅವರು ಜಯ ಗಳಿಸಲಿದ್ದಾರೆ ಎಂದು ಕಾಂಗ್ರೆಸ್‌ನ ಉಡುಪಿ - ಮಂಗಳೂರು ಜಿಲ್ಲೆಯ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌ ಹೇಳಿದರು. ಕುಂದಾಪುರದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ವಿರೋಧ ಪಕ್ಷದ ನಾಯಕರಾಗಿದ್ದ ದಿನಗಳಲ್ಲಿ ಬ್ರಹ್ಮಾವರದ ಸಕ್ಕರೆ ಕಾರ್ಖಾನೆಗಾಗಿ ಪಾದಯಾತ್ರೆ ನಡೆಸಿದ್ದ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಬಳಿಕ ಹೋರಾಟದ ಮಾತು ಮರೆತಿದ್ದರು. ಬಿಜೆಪಿ ಸರಕಾರದ ದಿನಗಳಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಸಕ್ಕರೆ ಕಾರ್ಖಾನೆಯನ್ನು ವಿದೇಶಿ ಉದ್ಯಮಿಯೊಬ್ಬರಿಗೆ ಮಾರಾಟ ನಡೆಸಲು ಪಿತೂರಿ ನಡೆಸಿದಾಗ ಅವಿಭಜಿತ ಜಿಲ್ಲೆಯ ಸಹಕಾರಿಗಳು ಹಾಗೂ ರೈತರು ಆಕ್ಷೇಪ ಮಾಡಿದ್ದರು. ಇದರಿಂದ ಈ ಭೂಮಿ ಉಳಿದುಕೊಂಡಿದೆ. ಇದೀಗ ಕಾಂಗ್ರೆಸ್‌ ಸರಕಾರ 12 ಕೋಟಿ ರೂ. ನೆರವು ನೀಡುವುದರೊಂದಿಗೆ ಜಿಲ್ಲೆಯ ಜನರಿಗೆ ನೀಡಿದ ಭರವಸೆ ಉಳಿಸಿಕೊಂಡಿದೆ ಎಂದರು.

ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಉಪಾಧ್ಯಕ್ಷ ಬಿ. ಹಿರಿಯಣ್ಣ, ಪ್ರಧಾನ ಕಾರ್ಯದರ್ಶಿ ಕೋಣಿ ನಾರಾಯಣ ಆಚಾರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ವಿಕಾಸ ಹೆಗ್ಡೆ, ಮಾಜಿ ಜಿ. ಪಂ. ಅಧ್ಯಕ್ಷ ರಾಜು ಎಸ್‌. ಪೂಜಾರಿ, ನಗರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಣೇಶ್‌ ಶೇರುಗಾರ, ಪುರಸಭೆಯ ಮಾಜಿ ಉಪಾಧ್ಯಕ್ಷ ಜೇಕಬ್‌ ಡಿ'ಸೋಜಾ, ಕಾಂಗ್ರೆಸ್‌ ವಕ್ತಾರ ಚಂದ್ರಶೇಖರ ಶೆಟ್ಟಿ, ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ, ಪಕ್ಷದ ಪ್ರಮುಖರಾದ ಕಾಳಪ್ಪ ಪೂಜಾರಿ ಕೋಡಿ, ಬಿ. ಹಾರೂನ್‌ ಸಾಹೇಬ್‌, ಚಂದ್ರ ಅಮೀನ್‌, ನಾಗರಾಜ್‌ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com