ಅಂಗಾಂಗ ದಾನ ಮಾಡಿದ ನಟ ಅಮೀರ್‌ ಖಾನ್‌

ಮುಂಬೈ: ಸರಳತೆ, ಸಾಮಾಜಿಕ ಜಾಗೃತಿಗೆ ಹೆಸರಾದ ನಟ ಅಮೀರ್‌ ಖಾನ್‌ ಈಗ ಮತ್ತೂಂದು ಆದರ್ಶ ಮೆರೆದಿದ್ದಾರೆ. ತಮ್ಮ ಮರಣಾನಂತರ ಅಂಗಾಂಗ ದಾನ ಮಾಡುವ ಮಹತ್ತರ ತೀರ್ಮಾನಕ್ಕೆ ಅವರು ಸಹಿ ಹಾಕಿದ್ದಾರೆ.

ಮಾ.27ರಂದು ನಡೆದ ಮಹಾರಾಷ್ಟ್ರ ಅಂಗಾಗ ದಾನ ದಿನದಂದು ಇಲ್ಲಿನ ಕೆ.ಇ.ಎಮ್‌. ಆಸ್ಪತ್ರೆಯಲ್ಲಿ ಅಮೀರ್‌ ಖಾನ್‌ ಅಂಗಾಂಗ ದಾನದ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಮರಣಾನಂತರ ತಮ್ಮ ಮೂತ್ರಕೋಶ, ಪಿತ್ಥಜನಕಾಂಗ, ಹೃದಯ, ಶ್ವಾಸಕೋಶ, ಮೇದೋಜೀರಕ ಗ್ರಂಥಿ, ಕರುಳು, ಕಣ್ಣು, ಕಿವಿ ತಮಟೆ, ಹೃದಯ ಕವಾಟ, ಎಲುಬುಗಳನ್ನು ದಾನ ಮಾಡುವ ನಿರ್ಧಾರ ಮಾಡಿದ್ದಾರೆ.

ಹಲವಾರು ದಿನಗಳಿಂದ ಅಂಗಾಂಗ ದಾನದ ಬಗ್ಗೆ ಚಿಂತಿಸುತ್ತಿದ್ದೆ. ಈ ಬಗ್ಗೆ ಪತ್ನಿ ಕಿರಣ್‌ ಜೊತೆ ಚರ್ಚೆ ನಡೆಸಿದ್ದೇನೆ. ಈ ಮೂಲಕ ಇನ್ನೊಬ್ಬರು ಚೆನ್ನಾಗಿ ಬದುಕಬಹುದು ಎಂಬ ಉದ್ದೇಶದಿಂದ, ಅಂಗಾಂಗ ದಾನಕ್ಕೆ ಸಂತೋಷವಾಗಿ ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com