ಫಾಂಟ್‌ ಬದಲಿಸಿದ್ರೆ 2200 ಕೋಟಿ ಉಳಿತಾಯ !

ನ್ಯೂಯಾರ್ಕ್‌: ಮುದ್ರಣದಲ್ಲಿ ವೆಚ್ಚ ದಾಯಕವಾಗಿರುವುದು ಶಾಯಿ ಮತ್ತು ಕಾಗದ. ಅದಲ್ಲೂ ಶಾಯಿಯ ಬೆಲೆ ಗಗನದಲ್ಲಿದೆ. ಇದೇ ವಿಚಾರದಲ್ಲಿ ತಲೆ ಓಡಿಸಿದ ಭಾರತೀಯ ಮೂಲದ ಪೋರನೊಬ್ಬ, ಅಮೆರಿಕ ಸರ್ಕಾರ ತನ್ನ ದಾಸ್ತಾ ವೇಜುಗಳನ್ನು ಮುದ್ರಿಸುವ ಅಕ್ಷರಗಳನ್ನು ಬದಲಾಯಿಸಿ 2390 ಕೋಟಿ ರೂ. ಉಳಿಸುವ ಬಗ್ಗೆ ಉಳಿತಾಯದ ಪಾಠ ಹೇಳಿದ್ದಾನೆ. 

ಪೀಟರ್ಬರ್ಗ್‌ನ ಮಿಡ್ಲ್ ಸ್ಕೂಲ್‌ನಲ್ಲಿ ಕಲಿಯುತ್ತಿರುವ ಸುವೀರ್‌ ಮೀರ್‌ಚಂದಾನಿ (14) ಈ ಮೇಧಾವಿ. 

ಶಾಲೆಯ ವಿಜ್ಞಾನ ಉತ್ಸವದಲ್ಲಿ ಪ್ರದರ್ಶನವೊಂದರ ಸಲುವಾಗಿ ವೆಚ್ಚ ಕಡಿತದ ಬಗ್ಗೆ ಚಿಂತಿಸುತ್ತಿದ್ದಾಗ, ಸುವೀರ್‌ಗೆ ವಿವಿಧ ಗಾತ್ರಗಳ ಅಕ್ಷರಗಳ ಮುದ್ರಣಕ್ಕೆ ಬಳಕೆಯಾಗುವ ಶಾಯಿಗಾಗಿ ಆಗುತ್ತಿರುವ ಖರ್ಚಿನ ಲೆಕ್ಕ ಹೊಳೆಯಿತಂತೆ. 

ಸುವೀರ್‌ ವಾದದ ಪ್ರಕಾರ, ಇಂಗ್ಲಿಷ್‌ನ ಇ, ಟಿ, ಎ, ಒ ಮತ್ತು ಆರ್‌ ಅಕ್ಷರಗಳು ಅತಿ ಹೆಚ್ಚು ಸಲ ಬಳಕೆಯಾಗುತ್ತದೆ. ಅಮೆರಿಕದಲ್ಲಿ ಇಂಗ್ಲಿಶ್‌ ಅಕ್ಷರಗಳನ್ನು ಮುದ್ರಿಸಲು ಗ್ಯಾರಮೊಂಡ್‌, ಟೈಮ್ಸ್‌ ನ್ಯೂ ರೋಮನ್‌, ಸೆಂಚುರಿ ಗೋಥಿಕ್‌ ಮತ್ತು ಕಾಮಿಕ್‌ ಸ್ಯಾನ್ಸ್‌ ಎಂಬ ಫಾಂಟ್‌ ಬಳಸುತ್ತಾರೆ. 

ಈ ಪೈಕಿ ಗ್ಯಾರಮೊಂಡ್‌ ಅತಿ ತೆಳುವಾದ ಅಕ್ಷರವಾಗಿರುವುದರಿಂದ ಶಾಯಿ ಕಡಿಮೆ ಸಾಕು ಎಂದು ಸುವೀರ್‌ ಮೀರ್‌ಚಂದಾನಿ ಹೇಳಿದ್ದಾನೆ. 

ತಂತ್ರವೇನು? 

ಅಮೆರಿಕದ ಸರ್ಕಾರ ತನ್ನ ದಾಸ್ತಾವೇಜುಗಳಲ್ಲಿ ಟೈಮ್ಸ್‌ ರೋಮನ್‌ ಫಾಂಟ್‌ ಬಳಸುತ್ತದೆ. ಸರ್ಕಾರ ಮುದ್ರಣದಲ್ಲಿನ ಶಾಯಿಗಾಗಿ ವರ್ಷವೊಂದಕ್ಕೆ ಸಾವಿರಾರು ಕೋಟಿ ರೂ.ಗಳನ್ನು ವೆಚ್ಚಮಾಡುತ್ತದೆ. ಟೈಮ್ಸ್‌ ರೋಮನ್‌ ಬದಲಿಗೆ ಗ್ಯಾರಮೊಂಡ್‌ ಫಾಂಟ್‌ ಬಳಸಿದರೆ ವಾರ್ಷಿಕ 2200 ಕೋಟಿ ರೂ.ವರೆಗೆ ಉಳಿತಾಯ ಮಾಡಬಹುದು ಎಂಬುದು ಸುವೀರ್‌ನ ವಾದ. 
                                                                                                                                               ಉದಯವಾಣಿ ಕೃಪೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com