15 ಮಂದಿ 23 ನಾಮಪತ್ರ ಸಲ್ಲಿಕೆ

ಉಡುಪಿ: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ನಾಮಪತ್ರಗಳ ಸುರಿಮಳೆಯೇ ಆಗಿದೆ. ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ 8 ಮಂದಿ 13 ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿವರೆಗೆ ಒಟ್ಟು 15 ಮಂದಿ 23 ನಾಮಪತ್ರ ಸಲ್ಲಿಸಿದ್ದಾರೆ. 

ಕಾಂಗ್ರೆಸ್‌ನಿಂದ ಜಯಪ್ರಕಾಶ್ ಹೆಗ್ಡೆ ನಾಲ್ಕು ನಾಮಪತ್ರ ಸಲ್ಲಿಸದರೆ, ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 3 ನಾಮಪತ್ರ ಸಲ್ಲಿಸಿದರು. ನಾಮಪತ್ರದ ಸಲ್ಲಿಸುವ ಮೊದಲ ದಿನ ಶೋಭಾ ಒಂದು ನಾಮಪತ್ರ ಸಲ್ಲಿಸಿದ್ದರು. ಸಿಪಿಐ ರೆಡ್‌ಸ್ಟಾರ್‌ನಿಂದ (ಎಂ.ಎಲ್.) ಸಿ.ಜೆ.ಜಗನ್ನಾಥ, ಪಕ್ಷೇತರರಾಗಿ ಬಿ.ಧನಂಜಯ, ಎಂ.ಡಿ.ಮೊಯ್ದೀನ್‌ಖಾನ್, ಮಂಜುನಾಥ ಜಿ., ಶ್ರೀನಿವಾಸ, ಸುಧೀರ್ ಕಾಂಚನ್ ಬುಧವಾರ ನಾಮಪತ್ರ ಸಲ್ಲಿಸಿದವರು. 

ಇವರಲ್ಲದೆ ಜೆಡಿಎಸ್‌ನಿಂದ ಧನಂಜಯ ಕುಮಾರ್, ಸಿಪಿಐಯ ವಿಜಯ ಕುಮಾರ್, ಬಿಎಸ್‌ಪಿಯಿಂದ ಜಾಕಿರ್ ಹುಸೇನ್, ಆಮ್ ಆದ್ಮಿ ಪಕ್ಷದ ಗುರುದೇವ ಎಸ್.ಎಚ್., ಪಕ್ಷೇತರರಾದ ಶ್ರೀಕಾಂತ್ ಬಿ. ಆಚಾರ್ಯ, ಸುಂದರ ಕುಮಾರ್ ನಾಮಪತ್ರ ಸಲ್ಲಿಸಿದವರಾಗಿದ್ದಾರೆ. 

ಒಟ್ಟು ಬಿಜೆಪಿ 4, ಕಾಂಗ್ರೆಸ್‌ನಿಂದ 4, ಜೆಡಿಎಸ್‌ನಿಂದ 2, ಸಿಪಿಐ (ಎಂಎಲ್) ರೆಡ್ ಸ್ಟಾರ್‌ನಿಂದ 2, ಬಿಎಸ್‌ಪಿಯಿಂದ 1, ಆಮ್ ಆದ್ಮಿಯಿಂದ 1, ಸಿಪಿಐಯಿಂದ 1 ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ 8 ಒಟ್ಟು 23 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com