ಯಡಿಯೂರಪ್ಪಗೆ ಮತಯಾಚಿಸುವ ನೈತಿಕತೆಯಿಲ್ಲ ಮಧು ಬಂಗಾರಪ್ಪ

ಶಿರೂರು : ರಾಜ್ಯದಲ್ಲಿ ಹಗರಣಗಳ ಮೂಲಕ ಜೈಲುವಾಸ ಅನುಭವಿಸಿದ ಯಡಿಯೂರಪ್ಪರ ಪುತ್ರ ಕಳೆದ ಬಾರಿ ಶಿವಮೊಗ್ಗ ಸಂಸದರಾಗಿದ್ದಾರೆ. ಕ್ಷೇತ್ರದ ಅಭಿವೃದ್ದಿಯ ಮಾತಿರಲಿ, ಕನಿಷ್ಟ ಪಕ್ಷ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಫಂಧಿಸದೇ ವಯಕ್ತಿಕ ರಾಜಕಾರಣ ಮಾಡಿದ್ದಾರೆ. ಬಿ.ಎಸ್‌.ಯಡಿಯೂರಪ್ಪರವರಿಗೆ ಈ ಭಾಗದಲ್ಲಿ ಮತಯಾಚಿಸಲು ನಾಚಿಕೆಯಾಗಬೇಕು. ಅವರಿಗೆ ಜನರ ಬಳಿ ತೆರಳುವ ನೈತಿಕತೆಯಿಲ್ಲ ಎಂದು ಜೆ.ಡಿ.ಎಸ್‌ ಶಾಸಕ ಮಧು ಬಂಗಾರಪ್ಪ ಹೇಳಿದರು.

ಅವರು ಶಿರೂರಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತ ಮಾತನಾಡಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಇನ್ನು ಖಾತೆ ತೆರೆದಿಲ್ಲ. ಜೆ.ಡಿ.ಎಸ್‌. ಮೂರು ಶಾಸಕ ಬಲವಿದೆ. ಹಿಂದಿನ ಅವಧಿಯ ಸಂಸದರಾದ ಬಿ.ವೈ.ರಾಘವೇಂದ್ರ ಚುನಾವಣೆಗೆ ಸ್ಫರ್ಧಿಸಿದರೆ ಸೋಲು ಖಚಿತ ಎಂದು ಸ್ವತಃ ಯಡಿಯೂರಪ್ಪ ಸ್ಫರ್ಧಿಸಿದ್ದಾರೆ. ಬಂಗಾರಪ್ಪರವರ ಯೋಜನೆಗಳು ಅನೇಕ ಕುಟುಂಬಗಳು ಇಂದಿಗೂ ನೆಮ್ಮದಿಯಿಂದ ಬದುಕುವಂತೆ ಮಾಡಿದೆ. ಆವರ ಅಪಾರ ಅಭಿಮಾನಿಗಳು ಜೆ.ಡಿ.ಎಸ್‌ ಬೆಂಬಲಿಸುತ್ತಿದ್ದಾರೆ. ಅನುಭವದ ಕೊರತೆ ಅಭ್ಯರ್ಥಿಯ ಆಯ್ಕೆಗೆ ತೊಂದರೆಯಾಗುವುದಿಲ್ಲ ಎಂದರು.

ಈ ಸಂಧರ್ಭದಲ್ಲಿ ಶಿವಮೊಗ್ಗ ಲೋಕಸಭಾ ಜೆ.ಡಿ.ಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌, ಜೆ.ಡಿ.ಎಸ್‌ ಮುಖಂಡರಾದ ಡಿ.ಆರ್‌.ರಾಜು, ಮನ್ಸೂರ್‌ ಇಬ್ರಾಹಿಂ, ರಂಜಿತ್‌ ಶೆಟ್ಟಿ, ಶಾಲಿನಿ ಶೆಟ್ಟಿ, ರಮೇಶ, ಸಂದೇಶ ಭಟ್‌, ಕಿಶೋರ ಕುಮಾರ್‌, ಮುಂತಾದವರು ಹಾಜರಿದ್ದರು.

ಬೈಂದೂರಿಗೆ ಬರಲಿದ್ದಾರೆ ನಟ-ನಟಿಯರ ದಂಡು.

ವರನಟ ಡಾ.ರಾಜ್‌ ಕುಮಾರ್‌ ಕುಟುಂಬದವರಾಗಿರುವ ಜೊತೆಗೆ ನಟ ಶಿವರಾಜ್‌ ಕುಮಾರ್‌ ಪತ್ನಿಯಾಗಿರುವುದರಿಂದ ನಿಮ್ಮ ಪರ ಮತಯಾಚಿಸಲು ಸಿನಿಮಾ ನಟರು ಆಗಮಿಸಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಯಿಸಿದ ಗೀತಾ ಶಿವರಾಜ್‌ ಕುಮಾರ್‌ ಈಗಾಗಲೇ ಹೆಚ್ಚಿನ ನಟ-ನಟಿಯರು ನನ್ನ ಪರವಾಗಿ ಪ್ರಚಾರಕ್ಕೆ ಆಗಮಿಸುವ ಉತ್ಸುಕತೆಯಲ್ಲಿದ್ದಾರೆ .ರಾಜಕೀಯಕ್ಕಿಂತ ಹೆಚ್ಚಾಗಿ ನನ್ನ ಮೇಲಿನ ವಯಕ್ತಿಕ ಅಭಿಮಾನದಿಂದ ಆಗಮಿಸಲಿದ್ದಾರೆ. ಬೈಂದೂರು,ಶಿವಮೊಗ್ಗ ಮುಂತಾದ ಕಡೆ ಪ್ರಚಾರ ಕಾರ್ಯಕ್ರಮ ಆಯೋಜಿಸಿದ್ದೇವೆ. ಒಂದೆರೆಡು ದಿನದಲ್ಲಿ ಸ್ಫಷ್ಟಪಡಿಸಲಾಗುತ್ತದೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com