ಶಿವಾನಂದ ನಾಯ್ಕ್ ನಾಮಪತ್ರ ವಾಪಸ್: ಕುಮಾರಸ್ವಾಮಿ ಗರಂ

ಉತ್ತರ ಕನ್ನಡ: ಉತ್ತರ ಕನ್ನಡ ಕ್ಷೇತ್ರದ ಕ್ಷೇತ್ರಕ್ಕೆ ಜೆಡಿಎಸ್ ಪರವಾಗಿ ನಾಮಪತ್ರ ಸಲ್ಲಿಸಿದ ಶಿವಾನಂದ ನಾಯ್ಕ್ ತನ್ನ ನಾಮಪತ್ರವನ್ನು ವಾಪಾಸ್ ಪಡೆದಿದ್ದು, ಚುನಾವಣೆಗೆ ಪಕ್ಷದ ನಾಯಕರು ಆರ್ಥಿಕ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಾಮಪತ್ರವನ್ನು ವಾಪ್ಸ್ ಪಡೆಯಲು ಕೆಲವೇ ಗಂಟೆಗಳು ಬಾಕಿ ಇರುವಾಗ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಶಿವಾನಂದ ನಾಯಕ್ ನಾಮ ಪತ್ರವನ್ನು ವಾಪಸ್ ಪಡೆದರು. ಇದ ರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಪ್ರಶಾಂತ್ ದೇಶಪಾಂಡ ಮತ್ತು ಬಿಜೆಪಿಯ ಅನಂತ ಕುಮಾರ್ ಹೆಗ್ಡೆ ನಡುವೆ ನೇರವಾದ ಸ್ಪರ್ಧೆ ಏರ್ಪ ಟ್ಟಂತಾಗಿದೆ.
ಬಿಜೆಪಿ ತೊರೆದು ಜೆಡಿಎಸ್ ಸೇರಿದ ಶಿವಾನಂದ ನಾಯಕ್‍ರನ್ನು ಎಚ್. ಡಿ. ದೇವೇಗೌಡ ಮತ್ತು ಕುಮಾರ ಸ್ವಾಮಿಯವರು ಸ್ವಾಗತಿಸಿ ಮೊದಲ ಪಟ್ಟಿಯಲ್ಲೇ ಅವರಿಗೆ ಟಿಕೆಟ್ ನೀಡಿದ್ದರು. 
ಶಿವಾನಂದ ನಾಯಕ್‍ರವರ ಈ ನಡೆಯಿಂದ ಜೆಡಿಎಸ್‍ನಾಯಕ ಕುಮಾರ ಸ್ವಾಮಿ ಸಿಡಿಮಿಡಿಗೊಂಡಿ ದ್ದಾರೆ. ಈ ಕ್ಷೇತ್ರದಲ್ಲಿ ಹಲವಾರು ಮಂದಿ ಸ್ಪರ್ಧಿಸಲು ಮುಂದೆ ಬಂದಿದ್ದರೂ ಶಿವಾನಂದ ನಾಯಕರಿಗೆ ಟಿಕೇಟು ನೀಡಿದ್ದು ಈಗ ಅವರು ನಂಬಿಕೆ ದ್ರೋಹ ಮಾಡಿದ್ದಾರೆ. ನಾವು ಅವರಿಗೆ ಚುನಾವಣಾ ಖರ್ಚಿಗಾಗಿ ಹಣ ನೀಡಿ ದ್ದೇವೆ, ಅದನ್ನು ವಾಪಸ್ ಮಾಡಲಿ. ಶಿವಾನಂದ ನಾಯ್ಕ್ ಮಾಡುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ. ಶಿವಾನಂದ ನಾಯಕ್ ಕೊನೆಯ ಗಳಿಗೆಯಲ್ಲಿ ಕೈಕೊಟ್ಟದ್ದರಿಂದ ಜೆಡಿಎಸ್‍ಗೆ ಇರಿಸುಮುರಿಸು ಉಂಟಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com