ಶೋಭಾ ನಾಮಪತ್ರ ಸಲ್ಲಿಕೆ, ಆಸ್ತಿ ವಿವರ ಘೋಷಣೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ(47) 7.21 ಕೋಟಿ ರೂ. ಆಸ್ತಿಯ ಒಡತಿ, ಜತೆಗೆ 3.81 ಕೋಟಿ ರೂ. ಸಾಲಗಾತಿ. ಇದು ಬುಧವಾರ ಉಡುಪಿ ಚಿಕ್ಕಮಗಳೂರು ಚುನಾವಣಾಧಿಕಾರಿಗೆ ಸಲ್ಲಿಸಿದ ನಾಮಪತ್ರದ ಜತೆಗೆ ನೀಡಿದ ಆಸ್ತಿ ವಿವರ. 

ನಗದು, ಠೇವಣಿ: ಕೈಯಲ್ಲಿ 1.76 ಲಕ್ಷ ರೂ. ನಗದು, ಅಪೆಕ್ಸ್ ಬ್ಯಾಂಕ್‌ನಲ್ಲಿ 4.38 ಲಕ್ಷ ರೂ., ಕೆನರಾ ಬ್ಯಾಂಕ್‌ನಲ್ಲಿ 4.46ಲಕ್ಷ ರೂ., ಫೆಡರಲ್ ಬ್ಯಾಂಕ್‌ನಲ್ಲಿ 75.38ಲಕ್ಷ ರೂ., ಐಎನ್‌ಜಿ ವೈಶ್ಯ ಬ್ಯಾಂಕಿನಲ್ಲಿ 6.54ಲಕ್ಷ ರೂ. ಠೇವಣಿ ಇದೆ. 

ಹೂಡಿಕೆ: ಮೆ. ಕಪಿಲ ಮಂಜುಶ್ರೀ ಅಪಾರೆಲ್ಸ್‌ನಲ್ಲಿ 50,000 ರೂ., 11.60 ಲಕ್ಷ ರೂ. ಜೀವವಿಮೆ, ಬಾಡಿಗೆ ಮನೆ ಠೇವಣಿಯಾಗಿ 4 ಲಕ್ಷ ರೂ., ಮೆ. ಕಪಿಲ ಮಂಜುಶ್ರೀ ಅಪಾರೆಲ್ಸ್‌ಗೆ 3.37 ಲಕ್ಷ ರೂ. ಸಾಲ, ಬಂಧುಗಳಿಗೆ 2ಲಕ್ಷ ರೂ., ಚೌಮೆನ್ ಪಾಲು ಬಂಡವಾಳ 20,000 ರೂ. ಇದೆ. 

ವಾಹನಗಳು: ಟೊಯೊಟಾ ಫಾರ್ಚುನರ್(12.35 ಲಕ್ಷ ), ಟೊಯೊಟಾ ಇನ್ನೋವಾ(13.86 ಲಕ್ಷ ). ಚಿನ್ನ: 27ಲಕ್ಷ ರೂ. ಮೌಲ್ಯದ ಚಿನ್ನ(1,000 ಗ್ರಾಂ.), 659 ಗ್ರಾಂ. ಚಿನ್ನಾಭರಣ, ಬೆಳ್ಳಿ: 1,400 ಗ್ರಾಂ., 10ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳಿವೆ. 

ಸ್ಥಿರಾಸ್ತಿ: ಕೃಷಿಯೇತರ ಭೂಮಿ(50*80ಚದರಡಿ ಹಾಗೂ 6,752 ಚದರಡಿ) 2.10 ಕೋಟಿ ರೂ. ಮೌಲ್ಯ ಹೊಂದಿದೆ. ಸಾಲ: ಫೆಡರಲ್ ಬ್ಯಾಂಕಿನಿಂದ 5.66 ಲಕ್ಷ ರೂ. ವಾಹನ ಸಾಲ, 8.81ಲಕ್ಷ ರೂ. ಇತರ ಸಾಲ, ಮೆ. ಆದರ್ಶ ಡೆವಲಪರ್ಸ್‌ಗೆ 3.67ಕೋಟಿ ರೂ. ಬಾಕಿಯಿದೆ. ವಿದ್ಯಾರ್ಹತೆ: ಬಿ.ಎ., ಎಂಎಸ್‌ಡಬ್ಲ್ಯು(ಸಮಾಜ ಸೇವೆ) ಹಾಗೂ ಎಂ. ಎ.(ಸಮಾಜ ಸೇವೆ) 

ದಿಢೀರ್ ನಾಮಪತ್ರ: ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಮೊದಲ ನಾಮಪತ್ರ ಸಲ್ಲಿಕೆ ಯಾಗಿದೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಯಾವುದೇ ಪ್ರಚಾರವಿಲ್ಲದೆ ದಿಢೀರ್ ಮೊದಲ ನಾಮಪತ್ರ ಸಲ್ಲಿಸಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com