ಮೋದಿ ಪ್ರಧಾನಿ ಎಂದು ಬಿಂಬಿಸಿದ್ದು ಜನತೆ ಪಕ್ಷವಲ್ಲ: ಬಿಎಸ್‌ವೈ

ಸಿದ್ದಾಪುರ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್‌ ದೇಶ ಕೊಳ್ಳೆ ಹೊಡೆದು ಜನತೆಗೆ ದ್ರೋಹ ಬಗೆಯುತ್ತಿದೆ. ಆದುದರಿಂದ ಭಾರತಕ್ಕೆ ಒಬ್ಬ ಸಮರ್ಥ ನಾಯಕ ಬೇಕು ಎಂದು ಜನತೆ ತೀರ್ಮಾನಿಸಿ ಮೋದಿ ಅವರನ್ನು ಪ್ರಧಾನಿ ಎಂದು ಘೋಷಿಸಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಅವರು ಸಿದ್ದಾಪುರ ಕೆಳಾಪೇಟೆಯ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ ಪಕ್ಷದ ಸಾರ್ವಜನಿಕ ಪ್ರಚಾರ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಪ್ರಪ್ರಥಮವಾಗಿ ಕೃಷಿ ಬಜೆಟ್‌ ಮಂಡನೆ ಮಾಡಿದ ಸಾಧನೆ ಬಿಜೆಪಿ ಪಕ್ಷದ್ದು. ಬಿಜೆಪಿ 1.20 ಲಕ್ಷ ಕೋ. ರೂ. ಬಜೆಟ್‌ ಮಂಡನೆ ಮಾಡುವ ಮೂಲಕ ಜನ ಸಾಮಾನ್ಯರ, ಬಡವರ, ಕೃಷಿಕರ ಪರವಾಗಿ ನಿಂತು ನೆಮ್ಮದಿಯ ಜೀವನ ನಡೆಸಲು ಕಾರಣವಾಗಿದೆ. ಕೃಷಿಕರ ಪಂಪ್‌ ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡುವ ಮೂಲಕ ಹಾಗೂ ಕೃಷಿ ಸಾಲ ಮನ್ನಾ ಮಾಡುವ ಮೂಲಕ ಕೃಷಿಕರ ಬಾಳಿನಲ್ಲಿ ಆಶಾಕಿರಣ ಮೂಡಿಸಿದೆ. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆಯ ಮೂಲಕ ಉತ್ತಮ ವಿದ್ಯಾಭ್ಯಾಸಕ್ಕೆ ದಾರಿ ಮಾಡಿ ಕೊಟ್ಟಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದು ಬಿಜೆಪಿ ಪಕ್ಷ ಬಲಿಷ್ಠವಾಗಿದೆ. ಈ ಭಾರಿ ಕ್ಷೇತ್ರದಲ್ಲಿ ಕಾರ್ಯಕರ್ತರು ಸಂಘಟನಾತ್ಮಕವಾಗಿ ಕೆಲಸ ನಿರ್ವಹಿಸಲಿದ್ದಾರೆ. ಮೋದಿ ಅಲೆಯಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕೊಚ್ಚಿ ಹೋಗಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಆಚ್ಚರಿಯ ರೀತಿಯಲ್ಲಿ ಫಲಿತಾಂಶ ಹೊರ ಬೀಳಲಿದೆ ಎಂದರು.

ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಬೈಂದೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಕಾರ್ಯದರ್ಶಿ ಸದಾಶಿವ ಪಡುವರಿ, ಮುಖಂಡರಾದ ಅಪ್ಪಣ್ಣ ಹೆಗ್ಡೆ ಬಸೂÅರು, ಕಿರಣ ಕೊಡ್ಗಿ, ಜಿ. ಪಂ. ಉಪಾಧ್ಯಕ್ಷೆ ಮಮತಾ ಆರ್‌. ಶೆಟ್ಟಿ, ತಾ. ಪಂ. ಉಪಾಧ್ಯಕ್ಷ ಹೇಮಾ ಆರ್‌. ಪೂಜಾರಿ, ಸದಸ್ಯರಾದ ಬಾಬು ಹೆಗ್ಡೆ, ಪ್ರಕಾಶ ಮೆಂಡನ್‌, ಗೌರಿ ದೇವಾಡಿಗ, ತಾ. ಪಂ. ಸದಸ್ಯರಾದ ಆರ್‌. ನವೀನಚಂದ್ರ ಶೆಟ್ಟಿ ಲಲಿತಾ ಶೆಟ್ಟಿ, ಚಂದ್ರವತಿ ಕೊಠಾರಿ, ಶ್ರೀಮತಿ ಮೊಗವೀರ, ಪಾರ್ವತಿ ಕುಲಾಲ, ವಕ್ತಾರ ಕೆ.ಬಿ. ಶೆಟ್ಟಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದರು.

ಮಾಜಿ ತಾ. ಪಂ. ಸದಸ್ಯ ಹದ್ದೂರು ರಾಜೀವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com