ಅತ್ಯಾಚಾರ ಅಪರಾಧಿಗೆ ಶಾಶ್ವತ ಪುರುಷತ್ವ ಹರಣ ಶಿಕ್ಷೆಯಾಗಲಿ: ಶೋಭಾ

ಉಡುಪಿ: ಅತ್ಯಾಚಾರಕ್ಕೊಳಗಾಗುವ ಮಹಿಳೆ ಬದುಕಿದ್ದೂ ಸತ್ತಂತೆ. ಹೀಗಾಗಿ ಅಪರಾಧಿ ಪುರುಷನಿಗೆ ಶಾಶ್ವತ ಪುರುಷತ್ವ ಹರಣದ ಕಠಿಣ ಶಿಕ್ಷೆಯಾಗಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರತಿಪಾದಿಸಿದ್ದಾರೆ. 

ಅವರು ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯ ಮೇಲಾಗುವ ಅತ್ಯಾಚಾರ, ದೌರ್ಜನ್ಯ ವಿರುದ್ಧ ಬಲವಾದ ಕಾನೂನು ಬೇಕು. ಈ ನಿಟ್ಟಿನಲ್ಲಿ ಅವಕಾಶ ಕೊಡಿ. ಲೋಕಸಭೆಯಲ್ಲಿ ಮಹಿಳಾ ಪರ ಧ್ವನಿಯಾಗುವೆ ಎಂದರು. 

ದಿಲ್ಲಿಯ ನಿರ್ಭಯಾ ಘಟನೆ ಬಳಿಕವೂ ದೇಶದಲ್ಲಿ ಮಹಿಳೆಯರೆಷ್ಟು ಸುರಕ್ಷಿತವೆನ್ನುವ ಪ್ರಶ್ನೆ ಕಾಡುತ್ತಿದೆ. ಪರಿಣಾಮ ಕಾರಿ ಕಾನೂನು ರೂಪಿಸುವುದು, ಜಾರಿಗೊಳಿಸುವುದು ಇನ್ನೂ ಸಾಧ್ಯವಾಗಿಲ್ಲ. ಮಹಿಳಾ ಪ್ರಕರಣಗಳಿಗೆ ಸಂಬಂಧಿಸಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚನೆಯಾಗಬೇಕು. ಅತ್ಯಾಚಾರವೆಸಗಿ ಪುರುಷತ್ವ ಹರಣಕ್ಕೊಳಗಾದವರನ್ನು ಯಾರೂ ಮದುವೆಯಾಗದ ಸ್ಥಿತಿ ಬರಬೇಕು. ಪುಂಡು, ಪೋಕರಿಗಳಿಗೂ ಇದು ಪಾಠವಾಗಬೇಕು. 

ಯುಪಿಎ ನೇತೃತ್ವ ವಹಿಸಿದ ಪ್ರಧಾನಿ ಡಾ.ಮನಮೋಹನ್ ಸಿಂಗ್ ದಶಕದ ಆಡಳಿತದಲ್ಲಿ ಮಾಡಿದ್ದು ಹಗರಣ, ಭ್ರಷ್ಟಾಚಾರದ ಅಭಿವೃದ್ಧಿ ಮಾತ್ರ. ರಾಜ್ಯ ಇಂಧನ ಸಚಿವೆಯಾಗಿದ್ದಾಗ ವಿದ್ಯುತ್ ಕೊರತೆ ನೀಗಲು ಕಲ್ಲಿದ್ದಲು ಕೇಳಿದರೂ ಕೊಡದೆ, ಖಾಸಗಿ ಕಂಪನಿಗಳ ಮೂಲಕ ಲೂಟಿ ಮಾಡಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಿಂದ ಬಿಜೆಪಿ ಹೆಚ್ಚಿನ ಸೀಟು ನಿರೀಕ್ಷಿಸಿದೆ. ರೈತರು, ಮೀನುಗಾರರ ರಕ್ಷಣೆ, ಅಡಕೆ ವಿಷಕಾರಿಯಲ್ಲವೆಂದು ಸುಪ್ರೀಂ ಕೋರ್ಟಿಗೆ ಮನವರಿಕೆ, ಬಗರ್ ಹುಕುಂ ಸಾಗುವಳಿಗಾರರನ್ನು ಒಕ್ಕಲೆಬ್ಬಿಸುವ ಸಮಸ್ಯೆಗೆ ಪರಿಹಾರ ಸಿಗಬೇಕು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಟ್ಟಾರು ರತ್ನಾಕರ ಹೆಗ್ಡೆ, ರಾಘವೇಂದ್ರ ಕಿಣಿ, ಉದಯ ಕುಮಾರ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ ಉಪಸ್ಥಿತರಿದ್ದರು. 

ಮೋದಿಗಾಗಿ ಮತ ನೀಡಿ: ನಾನು ಇಲ್ಲಿ ಗೆಲ್ಲಬಲ್ಲೆನೆಂಬ ವಿಶ್ವಾಸದಿಂದ ಪಕ್ಷದ ನಾಯಕತ್ವ ನನ್ನನ್ನು ಅಭ್ಯರ್ಥಿಯಾಗಿ ಆರಿಸಿದ್ದರೂ ನಾನಿಲ್ಲಿ ನಿಮಿತ್ತ ಮಾತ್ರಾ. ಈ ಬಾರಿಯ ಚುಣಾವಣೆಯಲ್ಲಿ ಅಭ್ಯರ್ಥಿ ಮುಖ್ಯವಲ್ಲ.ಮತದಾರರ ಒಲವು ಈ ಬಾರಿ ಎನ್‌ಡಿಯೆ ಕಡೆಗಿದೆ. ಯುಪಿಯೆ ಸರಕಾರದ ದುರಾಡಳಿತದಿಂದಾಗಿ ದೇಶ ಇಂದು ನರೇಂದ್ರ ಮೋದಿಯವರನ್ನು ಬಯಸುತ್ತಿದ್ದು ನನ್ನನ್ನು ಗೆಲ್ಲಿಸುವ ಮೂಲಕ ದೇಶವನ್ನು ಗೆಲ್ಲಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮನವಿ ಮಾಡಿದರು. 

ಅವರು ಕಾಪುವಿನಲ್ಲಿ ಭಾರತೀಯ ಜನತಾ ಪಾರ್ಟಿಯ ಕಾಪು ವಿಧಾನಸಭಾ ಕ್ಷೇತ್ರದ ನೂತನ ಕಛೇರಿಯನ್ನು ಉದ್ಘಾಟಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.ಗಡಿಯಾಚೆಗಿನ ಮತ್ತು ಒಳಗಿನ ವಿದ್ಯಾನಗಳಿಂದ ದೇಶ ಇಂದು ಗಂಭೀರ ಭದ್ರತೆಯ ಪ್ರಶ್ನೆ ಎದುರಿಸುತ್ತಿದೆ. ಅದನ್ನು ಮೆಟ್ಟಿ ನಿಲ್ಲಬಲ್ಲ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶದ ಮುಖವೇ ಬದಲಾಗಲಿದೆ.ಇಂದು ಗುಜರಾತ್ ಅಭಿವದ್ದಿಯಾಗುವುದು ಸಾದ್ಯವಾಗುವುದಾದರೆ ದೇಶದ ಇತರ ಭಾಗಗಳೂ ಯಾಕೆ ಅಭಿವದ್ಧಿಯಾಗಬಾರದು ಎಂದು ಪ್ರಶ್ನಿಸಿದರು. 

ಈ ಸಂದರ್ಭದಲ್ಲಿ ಯುವನಾಯಕ ನರೇಶ್ ಕಾಮತ್‌ನೇತತ್ವದಲ್ಲಿ ಬಿಜೆಪಿ ಸೇರಿದ ಹತ್ತಾರು ಕಾಂಗ್ರೇಸ್ ಕಾರ್ಯಕತ್ತರನ್ನು ಅವರು ಪಕ್ಷದ ದ್ವಜನೀಡುವ ಮೂಲಕ ಬರಮಾಡಿಕೊಂಡರು. 

ಅದ್ಯಕ್ಷತೆ ವಹಿಸಿದ್ದ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತವಿಕ ಮಾತನಾಡಿದರು.,ವಿಧಾನ ಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ,,ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್,ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಮಾತನಾಡಿದರು 

ಜಿಲ್ಲಾ ಬಿಜೆಪಿ ಅದ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ,ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ಯಾಮಲಾ ಕುಂದರ್,ಮಾಜಿ ಶಾಸಕ ರಘುಪತಿ ಭಟ್,ಜಿ.ಪಂ ಅದ್ಯಕ್ಷ ಉಪೇಂದ್ರ ನಾಯಕ್,ಮಾಜಿ ಜಿಪಂ ಅದ್ಯಕ್ಷ ಕಟಪಾಡಿ ಶಂಕರ ಪೂಜಾರಿ,ಜಿಲ್ಲಾ ಮಹಿಳಾ ಮೋರ್ಚಾ ಅದ್ಯಕ್ಷೆ ಶೀಲಾ ಶೆಟ್ಟಿ,ಜಿಲ್ಲಾ ರೈತಮೋರ್ಚಾ ಅದ್ಯಕ್ಷ ದೇವದಾಸ ಹೆಬ್ಬಾರ್,ಅಲ್ಪಸಂಖ್ಯಾತರ ಮೋರ್ಚಾದ ಅದ್ಯಕ್ಷ ಜೆರಾಲ್ಡ್ ಪೆರ್ನಾಂಡೀಸ್,ಜಿ.ಪಂ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು,ಗೀತಾಂಜಲಿ ಸುವರ್ಣ,ಜಿಲ್ಲಾ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಉಪಾದ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ,ಯಶ್‌ಪಾಲ್ ಸುವರ್ಣ,ಉದಯ ಕುಮಾರ್ ಶೆಟ್ಟಿ,ಶ್ರೀಮತಿ ನಯನಾ ಗಣೇಶ್,ಕಾರ್ಯದರ್ಶಿ ಗ್ಲಾಡೀಸ್ ಅಲ್ಮೇಡಾ,ಕೋಶಾಕಾರಿ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ,ಎಸ್ ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಶಿರಾಜ್ ಮಲ್ಲಾರು ಕಾಪು ಗ್ರಾ ಪಂ ಅದ್ಯಕ್ಷೆ ಉಷಾ ಶೆಣೈ,ಉಳಿಯಾರಗೋಳಿ ಗ್ರಾ ಪಂ ಅದ್ಯಕ್ಷ ಪ್ರದೀಪ್ ಯು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com