ನೀತಿಸಂಹಿತೆ ಪಾಲನೆಗೆ ಸೂಚನೆ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭೆ ಚುನಾವಣೆ ಕಣದಲ್ಲುಳಿದ ಅಭ್ಯರ್ಥಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಶನಿವಾರ ಚಿಹ್ನೆ ಹಂಚಿಕೆ ಅಂತಿಮಗೊಳಿಸಿದರು. ಕೇಂದ್ರ ಚುನಾವಣಾ ವೀಕ್ಷಕ ಅಮರ್‌ನಾಥ್ ಮಲಿಕ್ ಮಾತನಾಡಿ, ನ್ಯಾಯಸಮ್ಮತ, ಮುಕ್ತ ಮತದಾನ ಚುನಾವಣಾ ಆಯೋಗದ ಧ್ಯೇಯ. ಎಲ್ಲರೂ ಇದಕ್ಕೆ ಪೂರಕವಾಗಿ ವರ್ತಿಸಬೇಕೆಂದು ಸಲಹೆ ನೀಡಿದರು. 

ಜಿಲ್ಲಾ ಚುನಾವಣಾಧಿಕಾರಿ ಡಾ. ಮುದ್ದುಮೋಹನ್ ಮಾತನಾಡಿ, ಜಿಲ್ಲಾಡಳಿತ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲರಿಗೂ ಸಮಾನ ಅವಕಾಶ, ನೀತಿ ಸಂಹಿತೆ ಪಾಲನೆ ಮತ್ತು ಪಾರದರ್ಶಕ ವ್ಯವಸ್ಥೆಗೆ ಆದ್ಯತೆ ನೀಡಿದೆ. ಎಲ್ಲರೂ ಕಾನೂನನ್ನು ಗೌರವಿಸಬೇಕು ಎಂದರು. 

ಬೂತ್ ಮಟ್ಟದ ಅಧಿಕಾರಿಗಳ ಮುಖಾಂತರ ಈ ಬಾರಿಯೂ ಕೂಡ ಪ್ರತಿಯೊಬ್ಬರಿಗೂ ವೋಟರ್ ಸ್ಲಿಪ್ ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯಲಿದ್ದು, ಚುನಾವಣಾ ದಿನದಂದು ಬಿಎಲ್‌ಒ ಗಳು ಪ್ರತಿ ಬೂತ್‌ಗಳಲ್ಲಿ ಲಭ್ಯವಿರುವರು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಪ್ರತಿಯೊಬ್ಬ ಅಭ್ಯರ್ಥಿಗೂ 70 ಲಕ್ಷ ರೂ. ಚುನಾವಣೆ ವೆಚ್ಚ ಮಾಡಲು ಅವಕಾಶವಿದೆ. ತಮ್ಮ ಲೆಕ್ಕಪತ್ರಗಳನ್ನು ಪ್ರತಿ ಮೂರು ದಿನಗಳಿಗೊಮ್ಮೆ ಚುನಾವಣಾ ವೆಚ್ಚ ನೋಡಿಕೊಳ್ಳುವ ಅಧಿಕಾರಿಗಳಿಗೆ ಸಲ್ಲಿಸಬೇಕು. 

ಚುನಾವಣಾ ವೆಚ್ಚದ ಲೆಕ್ಕವನ್ನು ಸಮಗ್ರವಾಗಿ ಸಲ್ಲಿಸಿ ಎಂದ ಚುನಾವಣಾಧಿಕಾರಿಗಳು, ವೆಚ್ಚ ವೀಕ್ಷಣೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಕೇಂದ್ರ ಚುನಾವಣಾ ವೆಚ್ಚ ವೀಕ್ಷಕರು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿಗಳು, ನಾನಾ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com