ಜಾಹೀರಾತು ನಿಖರ ವೆಚ್ಚ ನೀಡಿ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪರವಾಗಿ ಜಾಹೀರಾತು ಪ್ರಸಾರ ಮಾಡುವ ಸ್ಥಳೀಯ ಕೇಬಲ್ ವಾಹಿನಿಗಳು ಜಾಹೀರಾತು ತಯಾರಿಕೆ ಮತ್ತು ಪ್ರಸಾರಕ್ಕೆ ತಗಲುವ ನಿಖರ ವೆಚ್ಚವನ್ನು ತಿಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಡಾ. ಮುದ್ದುಮೋಹನ್ ತಿಳಿಸಿದ್ದಾರೆ. ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಾಧ್ಯಮ ದೃಢೀಕರಣ (ಎಂಸಿಎಂಸಿ) ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಎಂಸಿಎಂಸಿ ಸಮಿತಿಯ ಅನುಮೋದನೆಗೆ ಸಲ್ಲಿಸಲಾಗುತ್ತಿರುವ ಅರ್ಜಿಗಳಲ್ಲಿ ಜಾಹೀರಾತು ಪಡೆಯವ ವಾಹಿನಿಗಳು ನಮೂದಿಸಿರುವ ದರಗಳು ಅತ್ಯಂತ ಕಡಿಮೆಯಿದ್ದು, ನಿಜವಾದ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆಯಿದೆ. ಜಾಹೀರಾತು ನಿರ್ಮಾಣ ಮತ್ತು ಪ್ರಸಾರದ ವೆಚ್ಚಗಳು ಅಭ್ಯರ್ಥಿಗಳ ಚುನಾವಣೆ ವೆಚ್ಚಕ್ಕೆ ಪರಿಗಣೆನೆಯಾಗುವುದರಿಂದ ಸರಿಯಾದ ದರವನ್ನು ನಮೂದಿಸಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. 

ಪತ್ರಿಕೆಯಲ್ಲಿ ಬರುವ ಪೇಯ್ಡ್ ನ್ಯೂಸ್‌ಗಳನ್ನು ಸಮಿತಿಯ ಸದಸ್ಯರು ಪರಿಶೀಲಿಸುತ್ತಿದ್ದು, ಪೇಯ್ಡ್ ನ್ಯೂಸ್ ವರದಿ ಕಂಡುಬಂದಲ್ಲಿ, ವರದಿಯ ವೆಚ್ವವನ್ನು ಸಮಿತಿ ನಿರ್ಧರಿಸಿ, ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಕುಮಾರ್, ಸಹಾಯಕ ಚುನಾವಣಾ ಲೆಕ್ಕ ವೀಕ್ಷಣಾಧಿಕಾರಿ ಬಿ.ತಿಮ್ಮಪ್ಪ, ಹಿರಿಯ ಪತ್ರಕರ್ತ ಮಾಧವಾಚಾರ್ಯ, ಮಣಿಪಾಲ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವರದೇಶ್ ಹಿರೇಗಂಗೆ, ನಗರ ಗ್ರಂಥಾಲಯಾಧಿಕಾರಿ ನಳಿನಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com