ಸೋದರರ ಕದನ ಶುರು

ಶಿವಮೊಗ್ಗ: 'ರೋಷಾಗ್ನಿ ಜ್ವಾಲೆ'ಯಿಂದ ಹೊತ್ತಿ ಉರಿಯುತ್ತಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಅವರು ಸಹೋದರ ಮಧು ಬಂಗಾರಪ್ಪ ನಡುವಿನ ಸಮರ ಈಗ ಬೀದಿಗೆ ಬಂದಿದೆ.
ಇದುವರೆಗೆ ಹೇಳಿಕೆ-ಪ್ರತಿ ಹೇಳಿಕೆಗೆ ಸೀಮಿತವಾಗಿದ್ದ ಇಬ್ಬರ ನಡುವಿನ ಕದನ ಶುಕ್ರವಾರ ಪ್ರತಿಭಟನೆಯ ಹಂತ ತಲುಪಿದೆ. ಶರಾವತಿ ಡೆಂಟಲ್ ಕಾಲೇಜಿಗೆ ಸಂಬಂಧಿಸಿದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಧು ವಿರುದ್ಧ ಕುಮಾರ ಬಂಗಾರಪ್ಪ ವ್ಯಗ್ರಗೊಂಡಿದ್ದು ಶರಾವತಿ ಡೆಂಟಲ್ ಕಾಲೇಜಿನ ಎದುರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.
ಈ ಭೂಮಿ ಈಡಿಗ ಸಮುದಾಯಕ್ಕೆ ಸೇರಿದ್ದು, ಮಧು ಬಂಗಾರಪ್ಪ  ಅಕ್ರಮವಾಗಿ ಈ ಭೂಮಿಯನ್ನು ಸೈಟುಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. ಟ್ರಸ್ಟ್ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿರುವ ಸರ್ಕಾರ ಕೂಡಲೇ ಸಿಐಡಿ ತನಿಖೆಗೆ ಒಪ್ಪಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ , ಗೃಹ ಸಚಿವ ಕೆ.ಜೆ. ಜಾರ್ಜ್, ಕಂದಾಯ ಸಚಿವರು, ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com