ಕುಂದಾಪುರದಲ್ಲಿ ಹೋಳಿ ರಂಗು

ಕುಂದಾಪುರ: ಇಲ್ಲಿನ ಕೊಂಕಣಿ ಖಾರ್ವಿ ಸಮಾಜ ಬಾಂಧವರಿಂದ ಸಂಜೆ ಜರುಗಿದ ಹೋಳಿ ಮೆರವಣಿಗೆ ಕುಂದಾಪುರವನ್ನು ಬಣ್ಣಗಳಲ್ಲಿ ಮಿಂದೇಳುವಂತೆ ಮಾಡಿತು. 
     ಸಮಾಜದ ಜನಪದೀಯ ವಾದ್ಯ ಗುಮಟೆ ವಾದನ, ಚೆಂಡೆ ವಾದನ, ಹೋಳಿ ನೃತ್ಯ ಮನ ಸೆಳೆಯಿತು. ಗಂಗಾವಾತರಣ ಶಿವ ಸ್ತಬ್ಧಚಿತ್ರ ಹೋಳಿ ಮೆರವಣಿಗೆಯ ಕಳೆ ಹೆಚ್ಚಿಸಿತು. ಎರಡು ತಾಸಿಗೂ ಮಿಕ್ಕಿ ನಡೆದ ಮೆರವಣಿಗೆಯಲ್ಲಿ ಸಮಾಜದ ಮಹಿಳೆಯರು, ಮಕ್ಕಳು, ಪುರುಷರು ಪರಸ್ಪರ ಬಣ್ಣ ಎರಚಿಕೊಂಡು ಬಣ್ಣದ ಹಬ್ಬದ ರಂಗು ಮೂಡಿಸಿದರು, ಕುಣಿದು ಕುಪ್ಪಳಿಸಿದರು. ಅಂತಾರಾಷ್ಟ್ರೀಯ ಎಫ್‌ಎಸ್‌ಎಲ್ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕರು ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com