‘ಬಾಲ್ಯ ಮಾಂಗಲ್ಯ’ ಪ್ರಸಂಗ ಬಿಡುಗಡೆ

ಕೋಟ: ಯಕ್ಷಗಾನ ಕಲೆ ನಮ್ಮ ಬದುಕಿನ ದೊಡ್ಡ ಕೊಂಡಿ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಕಲೆಯ ಉಳಿವಿಗೆ ಯುವಜನತೆ ಕೈಜೋಡಿಸಬೇಕು ಎಂದು ಕೋಟ ಪಡುಕರೆ ಲಕ್ಮ್ಷಿ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ರಾಜೇಂದ್ರ ಎಸ್.ನಾಯಕ್ ಹೇಳಿದರು.
ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ಶನಿವಾರ ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟದ ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಯಕ್ಷ ಸೌರಭ, ಜೆಸಿಐ ಕಲ್ಯಾಣಪುರ, ಕೋಟತಟ್ಟು ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಕೋಟ ಶಮಂತ್ ಕುಮಾರ್ ಅವರ  ಬಾಲ್ಯ ಮಾಂಗಲ್ಯ ಪ್ರಸಂಗ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇವತ್ತಿನ ಆಧುನಿಕ ಕಾಲದಲ್ಲಿ ವ್ಯಾವಹಾರಿಕವಾಗಿ ಯಾಂತ್ರಿಕೃತ ರೂಪದಲ್ಲಿ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುವ ಸಂದರ್ಭದ ದಿನಗ­ಳಲ್ಲಿ ಇಂದಿನ ಯುವಕರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿ­ರುವುದು ಶ್ಲಾಘನೀಯ. ಸಾಂಸ್ಕೃತಿಕ ಕಲೆಗಳಿಗೆ ಆದ್ಯತೆ ನೀಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ  ಒಂದು ಒಳ್ಳೆಯ ಮನಸ್ಸುಗಳು ಸೇರಿ ಸಮಾಜ ಕಟ್ಟುವ ಹಾಗೂ ಸಮಾಜಕ್ಕೆ ಮಾದರಿ­ಯಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಯುವ ಜನತೆಗೆ ಕರೆ ನೀಡಿದರು.
ಯಕ್ಷ ಸೌರಭ ಕಲಾರಂಗದ ಅಧ್ಯಕ್ಷ ಕೆ.ರಾಘವೇಂದ್ರ ತುಂಗ ಅಧ್ಯಕ್ಷತೆ ವಹಿ­ಸಿದ್ದರು. ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.
ಈ ಸಂದರ್ಭ ಖ್ಯಾತ ಪ್ರಸಂಗಕರ್ತ ಪ್ರಸಾದ ಕುಮಾರ್‌ ಮೊಗೆಬೆಟ್ಟು ಅವರಿಗೆ ಗುರುವಂದನೆ ಸಲ್ಲಿಸಲಾಯಿ­ತು. ಪತ್ರಕರ್ತ ರವೀಂದ್ರ ಕುಮಾರ್ ಕೋಟ ವಂದಿಸಿದರು. ರಂಜಿತ್ ಕುಮಾರ್ ಕಾರ್ಯಕ್ರವನ್ನು ನಿರೂಪಿಸಿ­ದರು. ನೂತನ ಪ್ರಸಂಗ ‘ಬಾಲ್ಯ ಮಾಂಗಲ್ಯ’ದ ಪ್ರದರ್ಶನ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com