31ನೇ ರಾಷ್ತ್ರೀಯ ಕನ್ನಡ ಸಮ್ಮೇಳನಕ್ಕೆ ಸಮಾಪನ

ದೆಹಲಿ: ಇಲ್ಲಿನ ಕರ್ನಾಟಕ ಸಂಘದ ಸಭಾಂಗಣ, ಡಾ. ಲಲಿತಾರಾವ್ ವೇದಿಕೆಯಲ್ಲಿ ನಡೆಯುತ್ತಿರುವ 31ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ಎ.6ರಂದು ಸಮಾಪನಗೊಂಡಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
     ಕರ್ನಾಟಕದ ಕರಾವಳಿ ಭಾಗದ ಪ್ರಮುಖರಾದ ಪತ್ರಕರ್ತ, ಸಂಘಟಕ ಶೇಖರ್ ಅಜೆಕಾರು, ವಿಜಯವಾಣಿಯ ಛಾಯಾಗ್ರಾಹಕ ಜನಾರ್ಧನ್ ಕೊಡವೂರು, ಪೂರ್ಣಿಮಾ ಜನಾರ್ಧನ್ ಕೊಡವೂರು, ಗಣೇಶ್ ಶೆಣೈ, ಸಾಹಿತಿ ಅಂಶುಮಾಲಿ, ನರೇಂದ್ರ ರೈ, ಕೆಮ್ತೂರು ಅಶೋಕ್ ಶೆಟ್ಟಿ ಮೊದಲಾದವರಿಗೆ ಸಮ್ಮೇಳನದಲ್ಲಿ ಗೌರವಿಸಲಾಯಿತು.
  ಜವಾಹರವಾಲ್ ನೆಹರು ವಿವಿ ಮುಖ್ಯ ಗ್ರಂಥಪಾಲಕ ಬಿ. ಎನ್. ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತ ಸರ್ಕಾರದ ಫ್ರಧಾನ ವಾರ್ತಾಧಿಕಾರಿ ಐ. ರಾಮ್ ಮೋಹನ್ ರಾವ್, ಜಿ. ಕೆ. ಸತ್ಯಪ್ರಕಾಶ್, ಬಿಸ್. ವೆಂಕಟಾಚಲಪತಿ ಮೊದಲಾದವರು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.   ಬಾ. ಸಾಮಗ ಸಮ್ಮೇಳನದ ನಿರ್ಣಯ ಮಂಡಿಸಿದರು.

ಸಮ್ಮೇಳನದ ನಿರ್ಣಯಗಳು:
* ದಿಲ್ಲಿ ಸರ್ಕಾರವು ದಿಲ್ಲಿಯ ರಸ್ತೆ ಪಾರ್ಕಗಳಿಗೆ ಖ್ಯಾತ ಕನ್ನಡಿಗರ ಹೆಸರು ನೀಡಬೇಕು. 
* ದಿಲ್ಲಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯ, ಭಿಮಸೇನ್ ಜೋಷಿ, ಶಿವಕುಮಾರ್ ಸ್ವಾಮಿಜಿ ಅವರ ಮೂರ್ತಿ ಪ್ರತಿಷ್ಠಾಪಿಸಬೇಕು.
* ದಕ್ಷಿಣ ಭಾರತೀಯ ಭಾಷೆ, ಸಂಸ್ಕøತಿಗಳಿಗೆ ದಕ್ಷಿಣ ಭಾರತೀರ ಭಾಷೆ ಅಕಾಡೆಮಿ ಸ್ಥಾಪಿಸಬೇಕು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com