ವೇತನ ಹೆಚ್ಚಳ: ಜೂನ್‌ನಿಂದ ಅಕ್ಷರ ದಾಸೋಹ ಕಾರ್ಮಿಕರ ಮುಷ್ಕರ

ಬೆಂಗಳೂರು: ಬಿಸಿಯೂಟ ಕಾರ್ಯಕ್ರಮಕ್ಕೆ ವೇತನ ಹೆಚ್ಚಳ ಮಾಡಬೇಕು ಎಂಬ ತಮ್ಮ ಬೇಡಿಕೆಗೆ ಸರ್ಕಾರ ಗಮನವೇ ನೀಡದಿ ರುವುದರಿಂದ ಕಂಗೆಟ್ಟಿರುವ ಅಕ್ಷರ ದಾಸೋಹ ಕಾರ್ಮಿಕರು ಜೂನ್‌ನಿಂದ ಮುಷ್ಕರ ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಕನಿಷ್ಠ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈವರೆಗೆ ಪ್ರತಿಭಟನೆ, ಧರಣಿ, ಮನವಿ ಪತ್ರ ಸಲ್ಲಿಕೆ ಸೇರಿದಂತೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ರಾಜ್ಯ ಸರ್ಕಾರ ಮಾತ್ರ ಅಕ್ಷರ ದಾಸೋಹ ಕಾರ್ಮಿಕರ ಹೋರಾಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ. ಹೀಗಾಗಿ ಮುಷ್ಕರ ನಡೆಸುವಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ.

ಶಾಲಾ ಮಕ್ಕಳಿಗೆ ಊಟ ನೀಡುವ ಮಾನವೀಯ ಕೆಲಸ ನಮ್ಮದು. ¾ ಕೆಲಸ ಸ್ಥಗಿತಗೊಳಿ ಸಿದರೆ ಇದರಿಂದ ಯಾವುದೇ ತಪ್ಪು ಮಾಡಿಲ್ಲದ ಮಕ್ಕಳು ತೊಂದರೆ ಅನುಭವಿಸುತ್ತಾರೆ ಎಂಬ ಅರಿವು ನಮಗೂ ಇದೆ. ಆದರೆ ಕಳೆದ 10-12 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಸರ್ಕಾರ ನಮ್ಮ ಬೇಡಿಕೆಗಳಿಗೆ ಕಿಂಚಿತ್ತೂ ಗಮನ ನೀಡಿಲ್ಲ. ಕೇವಲ ಭರವಸೆ ನೀಡಿ ನಮ್ಮನ್ನು ಸಾಗಹಾಕುತ್ತಿದೆ. ಹೀಗಾಗಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದರು.

ಮುಖ್ಯ ಅಡುಗೆ ತಯಾರಕರು ಮತ್ತು ಸಹಾಯಕರು ಸೇರಿ ರಾಜ್ಯದಲ್ಲಿ ಒಟ್ಟು 1.15 ಲಕ್ಷ ಅಕ್ಷರ ದಾಸೋಹ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ 65 ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಉಣಬಡಿಸಲು ಈ ಕಾರ್ಮಿಕರು ದಿನದಲ್ಲಿ ಕನಿಷ್ಠ 8 ರಿಂದ 10 ತಾಸು ಕೆಲಸ ಮಾಡಬೇಕಾಗುತ್ತದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com