ತನಗೆ ಬಡತನದ ಅರಿವಿದೆ : ಮೋದಿ

ಮಹಾರಾಷ್ಟ್ರ: ಬಡತನ ಏನೆಂಬುದು ನನಗೆ ಚೆನ್ನಾಗಿ ಗೊತ್ತು. ನಾನೊಬ್ಬ ಸಾಮಾನ್ಯ ಚಹಾ ಮಾರುವ ಹುಡುಗನಾಗಿ ಹಣ ಸಂಪಾದಿಸುತ್ತಿದ್ದೆ. ನನ್ನ ತಾಯಿ ಬೇರೆಯವರ ಮನೆಯಲ್ಲಿ ಪಾತ್ರೆ ತೊಳೆದು ನಮ್ಮ ಜೀವನ ನಿರ್ವಹಿಸುತ್ತಿದ್ದಳು' ಎಂದು ಬಿಜೆಪಿ ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
      ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಅವರು ಮತದಾರರಿಗೆ ತನ್ನ ಬದುಕಿನ ಬಡತನದ ದಿನಗಳಲ್ಲಿ ತಾನು ಅನುಭವಿಸಿದ್ದ ದುರಿತಗಳನ್ನು ವಿವರಿಸಿದರು. ನನಗೆ ಬಡತನ ಎಂದರೆ ಏನೆಂಬುದು ಚೆನ್ನಾಗಿ ಗೊತ್ತು; ಬಡವರ ಸ್ಥಿತಿ ಗತಿ ಹೇಗಿರುತ್ತದೆ ಎನ್ನುವುದೂ ಗೊತ್ತು ಎಂದು ಮೋದಿ ಹೇಳಿದರು.
       ನಾನೂ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಅನುಯಾಯಿ. ಬಡ ಜನರ, ಬಡ ಮತದಾರರ ಆರ್ಥಿಕ ಸಂಕಷ್ಟಗಳೇನು ಎಂಬುದನ್ನು ನನಗಿಂತ ಚೆನ್ನಾಗಿ ಬೇರೆಯವರು ಅರ್ಥ ಮಾಡಿಕೊಳ್ಳಲಾರರು ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.
        ದೇಶದಲ್ಲಿ ರೈತರು ಆರ್ಥಿಕ ಸಂಕಷ್ಟ, ಬೆಳೆ ನಾಶದಿಂದ ತತ್ತರಿಸಿ ಆತ್ಮಹತ್ಯೆಗೆ ಶರಣಾಗುತ್ತಿರುವಾಗ ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಅವರು ಕ್ರಿಕೆಟ್‌ ಸಂಬಂಧಿ ವಿಚಾರಗಳಲ್ಲಿ ವ್ಯಸ್ತರಾಗಿದ್ದಾರೆ. ಅಂತಹವರಿಗೆ ಬಡ ಜನರ, ಬಡ ರೈತರ ಕಷ್ಟಗಳು ಏನೆಂದು ಗೊತ್ತಿರಲು ಸಾಧ್ಯವೇ ಎಂದು ಮೋದಿ ಪ್ರಶ್ನಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com