ಮುಖ್ಯಮಂತ್ರಿ ಪದತ್ಯಾಗ ತಪ್ಪು ನಿರ್ಧಾರ !

ಹೊಸದಿಲ್ಲಿ: ಕೇವಲ 49 ದಿನಗಳ ಒಳಗೆ ತಾನು ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದುದು ತಪ್ಪೆಂಬುದನ್ನು ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಕೊನೆಗೂ ಒಪ್ಪಿಕೊಂಡಿದ್ದಾರೆ.

ಇಂಗ್ಲಿಷ್‌ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್‌, ತಾನು ಅಕಾಲಿಕವಾಗಿ ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದುದು ತಪ್ಪೆಂದು ಅನಂತರ ತನಗೆ ಮನವರಿಕೆಯಾಯಿತು ಎಂದು ಹೇಳಿದ್ದಾರೆ. 

ತತ್ವಕ್ಕೆ ಬದ್ದನಾಗಿ ತಾನು ದಿಲ್ಲಿ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡಿದುದನ್ನು ದಿಲ್ಲಿಯ ಮತದಾರ ಜನತೆ ಸಂಭ್ರಮಿಸಿ ಸ್ವಾಗತಿಸುತ್ತಾರೆ ಎಂದು ನಾನು ತಪ್ಪಾಗಿ ಭಾವಿಸಿದ್ದೆ. ನನ್ನ ರಾಜೀನಾಮೆಯನ್ನು ಜನರು ನಾನಂದುಕೊಂಡಂತೆ ಸ್ವೀಕರಿಸಲಿಲ್ಲ. ಅದು ಅವರಿಗೆ ಪಥ್ಯವೂ ಆಗಲಿಲ್ಲ. ಜನರು ನಾನು ಭಾವಿಸಿಕೊಂಡಂತೆ ನನ್ನ ರಾಜೀನಾಮೆಯನ್ನು ವಿಶಾಲವಾದ ಅರ್ಥದಲ್ಲಿ ಒಪ್ಪಿಕೊಳ್ಳುತ್ತಾರೆ ಎಂದು ನಾನು ತಿಳಿದಿದ್ದೆ. ಆದರೆ ಅದು ಹಾಗಾಗಲಿಲ್ಲ ಎಂದು ಕೇಜ್ರಿವಾಲ್‌ ಹೇಳಿದರು. 

ಹಾಗೆಂದು ನಾನು ರಾಜೀನಾಮೆ ನೀಡಿದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಜನಲೋಕಪಾಲ ಮಸೂದೆಯನ್ನು ಪಾಸು ಮಾಡಿಸುವುದು ಎಎಪಿಯ ಚುನಾವಣಾ ಪ್ರಣಾಳಿಕೆ ಅಂಶಗಳಲ್ಲಿ ಒಂದಾಗಿತ್ತು. ಅದು ಅಸಾಧ್ಯವಾದುದಕ್ಕೆ ನಾನು ರಾಜೀನಾಮೆ ನೀಡಿರುವುದು ನನ್ನ ಮಟ್ಟಿಗೆ ತಾತ್ವಿಕವಾಗಿ ಸರಿಯೇ ಆಗಿತ್ತು ಎಂದು ಕೇಜ್ರಿವಾಲ್‌ ಹೇಳಿದರು. ಜನಲೋಕಪಾಲ ಮಸೂದೆ ಪಾಸಾಗುವುದು ಕಾಂಗ್ರೆಸ್‌ಗೂ ಬಿಜೆಪಿಗೂ ಬೇಕಾಗಿರಲಿಲ್ಲ; ಆದುದರಿಂದಲೇ ಎಎಪಿ ದಿಲ್ಲಿ ಸರಕಾರ ಪತನಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ಕೇಜ್ರಿವಾಲ್‌ ಹೇಳಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com