ಎಎನ್‌ಎಫ್ ಶೂಟೌಟ್ ಪ್ರಕರಣ: ಕಾಂಗ್ರೆಸ್ ಮತೀಯ ಬಣ್ಣ: ಬಿಜೆಪಿ

ಬೆಳ್ತಂಗಡಿ: ಶೃಂಗೇರಿ ಶೂಟೌಟ್ ಪ್ರಕರಣಕ್ಕೆ ರಾಜಕೀಯ, ಮತೀಯ ಬಣ್ಣ ನೀಡುವ ಮೂಲಕ ನಕ್ಸಲ್ ನಿಗ್ರಹ ದಳದ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ. 

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಂಗೇರಿ ಶೂಟೌಟ್ ಪ್ರಕರಣದಲ್ಲಿ ಗೋಸಾಗಾಟ ನಡೆಸಿದ ಆರೋಪಿಯ ಪರವಾಗಿ ಕಾಂಗ್ರೆಸ್ ಸಚಿವರು ಹಾಗೂ ಮುಖಂಡರ ಮಧ್ಯೆ ಪರಿಹಾರ ನೀಡುವ ಬಗ್ಗೆ ಮೇಲಾಟ ನಡೆಸುತ್ತಿದ್ದು, ಒಂದು ಸಮುದಾಯವನ್ನು ತುಷ್ಟೀಕರಿಸುವ ಪ್ರಯತ್ನ ನಡೆಯುತ್ತಿದೆ. ಒಬ್ಬರಿಗಿಂತ ಒಬ್ಬರು ಈ ಪ್ರಕರಣದಲ್ಲಿ ತಾವೇ ಪರಿಹಾರ ನೀಡಿದ್ದು ಎಂಬ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು. 

ಆಕಸ್ಮಿಕವಾಗಿ ನಡೆದ ಘಟನೆ ಬಗ್ಗೆ ಸರಕಾರ ಸಿಒಡಿ ಹಾಗೂ ಮಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದೆ. ಅದರ ವರದಿ ಬರುವ ತನಕವಾದರೂ ಕಾಂಗ್ರೆಸ್ ನಾಯಕರು, ಸಚಿವರು ಮೌನ ವಹಿಸಬೇಕು ಎಂದು ಅವರು ಹೇಳಿದರು. 

ಶೂಟೌಟ್‌ನಲ್ಲಿ ಮತಪಟ್ಟ ವ್ಯಕ್ತಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾನೆ ಎಂಬ ಒಂದೇ ಕಾರಣಕ್ಕೆ ಇದನ್ನು ಕಾಂಗ್ರೆಸ್ ವೈಭವೀಕರಿಸುತ್ತಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಜನರಿಗೆ ಉತ್ತರಿಸಬೇಕಾಗಿದೆ. ಪುತ್ತೂರಿನಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮತಪಟ್ಟಿರುವುದು, ಮಂಗಳೂರಿನಲ್ಲಿ ಅಪಘಾತಕ್ಕೆ ಇಬ್ಬರು ಮತಪಟ್ಟಿರುವುದು, ಆ ಮಕ್ಕಳ ಮನೆಗಳಿಗೆ ಭೇಟಿ ನೀಡಲು ಸಮಯವಿಲ್ಲದ ಜಿಲ್ಲಾ ಉಸ್ತುವಾರಿ ಸಚಿವರು ಈ ಪ್ರಕರಣದಲ್ಲಿ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸುತ್ತಿರುವುದು ಜಿಲ್ಲೆಯ ದೌರ್ಭಾಗ್ಯ. ಇತ್ತೀಚೆಗ ಸುರಿದ ಗಾಳಿ, ಮಳೆಗೆ ಅನೇಕ ಕಷಿಕರ ಕಷಿ ಹಾನಿಯಾಗಿದ್ದು, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ವೈಫಲ್ಯ, ಹೀಗೆ ಜಿಲ್ಲೆ ಹತ್ತಾರು ಸಮಸ್ಯೆಗಳಿಂದ ತತ್ತರಿಸುತ್ತಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸುವುದನ್ನು ಬಿಟ್ಟು ಗೋಸಾಗಾಟಗಾರರ ಹಿಂದೆ ಬಿದ್ದರುವುದು ಜಿಲ್ಲೆಯ ಜನತೆಗೆ ಮಾಡಿದ ದ್ರೋಹ. ಇನ್ನಾದರೂ ಘಟನೆ ಬಗ್ಗೆ ವರದಿ ಬರುವವರೆಗೆ ಮೌನ ವಹಿಸಿದರೆ ಒಳ್ಳೆಯದು ಎಂದರು. 

ಬಂಟ್ವಾಳ ಟೋಲ್‌ಗೇಟ್‌ನಲ್ಲಿ ಹಲ್ಲೆ ನಡೆಸಿದವರ ಮೇಲೆ ವಾರಂಟ್ ಇದ್ದರೂ ಅವರನ್ನು ಬಂಧಿಸಲು ಅಡ್ಡಿಯಾಗುತ್ತಿರುವುದು. ಪೊಲೀಸ್ ಸ್ಟೇಷನ್‌ಗಳಲ್ಲಿ ಒತ್ತಡವನ್ನು ತರುವ ಕೆಲಸವನ್ನು ಕಾಂಗ್ರೆಸಿಗರು ಬಿಡಬೇಕು ಎಂದು ಒತ್ತಾಯಿಸಿದರು. 

ದ.ಕ. ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಶೇ. 80ರಷ್ಟು ಬೂತ್‌ಗಳ ವರದಿಯನ್ನು ನೀಡಿದ್ದು, ಈ ಮೂಲಕ ಬಿಜೆಪಿ ಕನಿಷ್ಠ 50 ಸಾವಿರಕ್ಕಿಂತಲೂ ಹೆಚ್ಚಿನ ಮತಗಳಿಂದ ಗೆಲ್ಲಲಿದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ ನಡೆಸಲು ಯತ್ನಿಸಿದರೂ ಅದು ಫಲ ನೀಡಲಿಲ್ಲ. ಜನರು ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಈ ಬಾರಿ ಬಿಜೆಪಿಗೆ ಮತ ನೀಡಿದ್ದಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಬಿಜೆಪಿ ತಾಲೂಕು ಸಮಿತಿ ಅಧ್ಯಕ್ಷ ಬಾಲಕಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಶಾರದಾ ರೈ, ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ನಂದ ಕುಮಾರ್ ಪೂಂಜಾಲಕಟ್ಟೆ, ಶಂಕರ್ ಹೆಗ್ಡೆ, ಸೀತಾರಾಮ ಬೆಳಾಲು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com