ಮುಸ್ಲಿಮರ ಹಾದಿ ತಪ್ಪಿಸುವ ಬುದ್ಧಿಜೀವಿಗಳು: ಎಂ.ವಿ. ಕಾಮತ್

ಉಡುಪಿ: ದೇಶದ ಮುಸ್ಲಿಮರು ಹಾದಿ ತಪ್ಪಿಲ್ಲ. ಆದರೆ, ಅವರನ್ನು ಬುದ್ಧಿಜೀವಿಗಳು ಹಾದಿ ತಪ್ಪಿಸುತ್ತಿದ್ದಾರೆ ಎಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಎಂ.ವಿ. ಕಾಮತ್ ಆರೋಪಿಸಿದ್ದಾರೆ.
     ಉಡುಪಿ ಬಿಜೆಪಿ ಮತ್ತು ನಮೋ ಬ್ರಿಗೆಡ್ ವತಿಯಿಂದ ನಡೆದ ಸಮಾರಂಭದಲ್ಲಿ ಪತ್ರಕರ್ತೆ ಮಧು ಪೂರ್ಣಿಮಾ ಕೇಶ್ವಾರ್ ಅವರು ಬರೆದಿರುವ 'ಮೋದಿ, ಮುಸ್ಲಿಂ, ಮೀಡಿಯಾ' ಎಂಬ ಇಂಗ್ಲಿಷ್ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
      ರಾಮಜನ್ಮ ಭೂಮಿಯಂತಹ ಘಟನೆಗಳಲ್ಲಿ ನಮ್ಮ ದೇಶದ ಮುಸ್ಲಿಮರು ಅನಾವಶ್ಯಕವಾಗಿ ಸತ್ಯದ ವಿರುದ್ಧ ವರ್ತಿಸಿದ್ದಾರೆ. ಇದರ ಹಿಂದೆ ಬುದ್ಧಿಜೀವಿಗಳಿದ್ದಾರೆ. ಅಯೋಧ್ಯೆ ಹಿಂದುಗಳ ಶ್ರದ್ಧಾಕೇಂದ್ರ, ಇದು ಮುಸ್ಲಿಮರಿಗೆ ಗೊತ್ತಿದ್ದೂ, ಅವರು ಇಲ್ಲ ಅವರು ತಮ್ಮ ಶ್ರದ್ಧಾಕೇಂದ್ರ ಎಂದು ಹೇಳುತ್ತಿದ್ದಾರೆ. ಅದರ ಬದಲು ಅವರು ಹಿಂದುಗಳ ಶ್ರದ್ಧಾಕೇಂದ್ರವನ್ನು ಹಿಂದುಗಳಿಗೆ ಬಿಟ್ಟುಕೊಟ್ಟಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಜೊತೆಗೆ ಅದೊಂದು ಹಿಂದೂ - ಮುಸ್ಲಿಂ ಸೌಹಾರ್ದಕ್ಕೆ ಕಾರಣವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
        ನರೇಂದ್ರ ಮೋದಿ ನಮ್ಮ ದೇಶದ ಸಮರ್ಥ ನಾಯಕರಾಗಿ ಮುನ್ನುಗ್ಗುತ್ತಿದ್ದರೂ, ನಮ್ಮ ದೇಶದ ಅದರಲ್ಲೂ ಇಂಗ್ಲಿಷ್ ಮಾಧ್ಯಮಗಳು ಅವರ ವಿರುದ್ಧ ಪ್ರಚಾರ ಮಾಡುತ್ತಿವೆ. ಗೋಧ್ರಾ ಪ್ರಕರಣದಲ್ಲಿ ಮೋದಿ ಅವರನ್ನು ಆರೋಪಿಯನ್ನಾಗಿ ಮಾಡಿದ್ದ ಮಾಧ್ಯಮಗಳು. ಅವರು ನ್ಯಾಯಾಲಯದಲ್ಲಿ ನಿರ್ದೋಷಿಯಾದಾಗ ಕ್ಷಮೆ ಕೇಳಲಿಲ್ಲ ಎಂದು ಕಾಮತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  
         ಲೇಖಕಿ ಕೇಶ್ವಾರ್, ಮೋದಿ ಬಗ್ಗೆ ಯಾರೋ ಹೇಳಿದ ಸುಳ್ಳುಗಳನ್ನು ತಾನು ಪುಸ್ತಕದಲ್ಲಿ ಬರೆದಿಲ್ಲ, ಗುಜರಾತನಲ್ಲಿ ಆಗಿರುವ ಅಭಿವೃದ್ಧಿಯನ್ನು ಕಣ್ಣಾರೆ ಕಂಡು ಬರೆದಿದ್ದೇನೆ ಎಂದು ಕೃತಿಯನ್ನು ಪರಿಚಯಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com