ಸುರಭಿ ಬಾಲ ಸಂಸ್ಕಾರ್ ಶಿಬಿರ ಅನಾವರಣ

ಬೈಂದೂರು: ಇಲ್ಲಿನ ಸುರಭಿ ಕಲಾಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನ ಜೀನಿಯಸ್ ಬ್ರೈನ್ ಅಬ್ಯಾಕಸ್‌ನ ಸಹಕಾರದೊಂದಿಗೆ ನೂತನ ಶೈಲಿಯ 10 ದಿನಗಳ ಸುರಭಿ ಬಾಲ ಸಂಸ್ಕಾರ್ ಶಿಬಿರವನ್ನು ಉ.ಜಿ.ಕ.ಸಾ ಪರಿಷತ್‌ನ ಮಾಜಿ ಅಧ್ಯಕ್ಷರೂ, ಸಾಹಿತಿಗಳೂ ಆದ ಉಪ್ಪುಂದ ಚಂದ್ರಶೇಖರ ಹೊಳ್ಳರು ಜ್ಯೋತಿ ಬೆಳಗಿಸಿ ಅನಾವರಣಗೊಳಿಸಿ ಪ್ರಸ್ತುತ ವ್ಯವಸ್ಥೆಯಲ್ಲಿ ನಮ್ಮ ಸಂಸ್ಕ್ರತಿಯನ್ನು ಉಳಿಸಿ ಬಲಿಷ್ಠಗೊಳಿಸಬೇಕಾದ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಈ 10 ದಿನಗಳಲ್ಲಿ ಮಕ್ಕಳಿಗೆ ಸಂಸ್ಕ್ರತಿಯೊಂದಿಗೆ ಹತ್ತು ಹಲವು ಕಾರ್ಯಚಟುವಟಿಕೆಗಳನ್ನು ತಿಳಿಯಪಡಿಸುವ ಈ ಶಿಬಿರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. 
      ಅಧ್ಯಕ್ಷತೆಯನ್ನು ಬೈಂದೂರು ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ.ಎಮ್. ಗೋವಿಂದರವರು ವಹಿಸಿದ್ದು, ಹೊಸ ವಿನ್ಯಾಸದೊಂದಿಗೆ ರೂಪುಗೊಂಡಿರುವ ಸುರಭಿ ಬಾಲ ಸಂಸ್ಕಾರ್ ಶಿಬಿರಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಮಾಜಿ ರಾಜ್ಯಪಾಲ ಜೀವ ವಿಮಾ ಅಧಿಕಾರಿ ರೋ. ಸೋಮನಾಥನ್, ಖ್ಯಾತ ಜಾದೂಗಾರ ಸತೀಶ್ ಹೆಮ್ಮಾಡಿ ಮತ್ತು ಜೀನಿಯಸ್ ಬ್ರೈನ್ ಅಬ್ಯಾಕಸ್‌ನ ಶ್ರೀಗುರುಪ್ರಸಾದ್ ಶುಭ ಹಾರೈಸಿದರು. ಶಿಬಿರದಲ್ಲಿ ಸುಮಾರು ನೂರಕ್ಕೂ ಮಿಕ್ಕಿ ಪುಟಾಣಿಗಳು ಭಾಗವಹಿಸುತ್ತಿದ್ದು ಯಶಸ್ವಿ ಸಂಸ್ಕಾರ್ ಶಿಬಿರವಾಗಿ ಮೂಡಲಿದೆ ಎಂದು ಸಮಘಟಕರು ತಿಳಿಸಿದ್ದಾರೆ.
   ಶಿಬಿರದ ನಿರ್ದೇಶಕ ಮತ್ತು ನಿರ್ವಾಹಕರಾದ ಸುರಭಿಯ ಸುಧಾಕರ್. ಪಿ ಬೈಂದೂರು ಕಾರ್ಯಕ್ರಮ ನಿರೂಪಿಸಿ, ಕ್ಷೇತ್ರ ಸಮಪನ್ಮೂಲ ವ್ಯಕ್ತಿ ಹಾಗೂ ಸುರಭಿಯ ಪಾಲಕರೂ ಆದ ಶ್ರೀ. ಸರ್ವೋತ್ತಮ್ ಭಟ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com