ಬೈಂದೂರು ವಿಶ್ವ ಚಿತ್ರಕಲಾ ದಿನ ಆಚರಣೆ

ಬೈಂದೂರು:  ಇಲ್ಲಿನ ಸುರಭಿ ಕಲಾ ಸಂಸ್ಥೆ ಆಶ್ರಯದಲ್ಲಿ ಹಾಗೂ ಜೀನಿಯಸ್ ಬ್ರೈನ್ ಅಬ್ಯಾಕಸ್‌ನ ಆಶ್ರಯದಲ್ಲಿ ನಡೆಯುತ್ತಿರುವ ಹತ್ತು ದಿನಗಳ ಬೇಸಿಗೆ ಶಿಬಿರ ಸುರಭಿ ಬಾಲ ಸಂಸ್ಕಾರ್ ಶಿಬಿರದಲ್ಲಿ ಖ್ಯಾತ ವಿಶ್ವಮಟ್ಟದ ಹಿರಿಯ ಚಿತ್ರಕಲಾವಿದ ಇಟಲಿಯ ಶ್ರೀ ಲಿಯನಾರ್ಡೊ ವಿಂಚಿಯವರ ಸ್ಮರಣಾರ್ಥ ನಡೆಸುತ್ತಿರುವ ವಿಶ್ವ ಚಿತ್ರಕಲಾ ದಿನಾಚರಣೆಯನ್ನು ಆಚರಿಸಲಾಯಿತು. 

ಕಾರ್ಯಕ್ರಮವನ್ನು ಖ್ಯಾತ ಚಿತ್ಕಲಾವಿದ ಉಪ್ಪುಂದ ಮಂಜುನಾಥ ಮಯ್ಯ ಜ್ಯೋತಿ ಬೆಳಗಿಸಿ ಉದ್ಘಾಟಿಸುವುದರ ಮೂಲಕ ಚಾಲನೆ ನೀಡಿ ಮಾನವನ ಏಕಾಗ್ರತೆಯಲ್ಲಿ ಚಿತ್ರಕಲೆಯ ಮಹತ್ವದ ಬಗ್ಗೆ ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಸಾಧನಾ ಸಂಗಮ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಯು. ನಾರಾಯಣ ಐತಾಳ ವಿಶ್ವ ಚಿತ್ರಕಲಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ಚಿತ್ರಕಲಾವಿದರಾದ ತ್ರಿವಿಕ್ರಮ ಉಪ್ಪುಂದ ಹಾಗೂ ಕಾಳಪ್ಪ ಬಡಿಗೇರರು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಹಿರಿಯ ಶಿಲ್ಪಿ ಹಾಗೂ ಚಿತ್ರ ಕಲಾವಿದ ವೆಂಕಟ್ರಮಣ ಆಚಾರ್ ಬಂಕೇಶ್ವರರವರನ್ನು ಗೌರವಿಸಿ ಸಮ್ಮಾನಿಸಲಾಯಿತು. 

ಸದ್ರಿ ವಿಶ್ವ ಚಿತ್ರಕಲಾ ದಿನಾಚರಣೆಯ ಅಂಗವಾಗಿ ಸುಮಾರು 125ಕ್ಕೂ ಮಿಕ್ಕಿ ವಿದ್ಯಾರ್ಥಿ/ಪುಟಾಣಿಗಳಿಗೆ ಮುಖವರ್ಣಿಕೆಯನ್ನು ಮಾಡಲಾಯಿತು. ಈ ಸಂದರ್ಭ ಚಿತ್ರಕಲಾವಿದರಾದ ಉಪ್ಪುಂದ ಮಂಜುನಾಥ ಮಯ್ಯ, ತ್ರಿವಿಕ್ರಮ, ಕ್ಲಾರಾ, ಕಾಳಪ್ಪ ಬಡಿಗೇರ, ವೀರೇಂದ್ರ ಕುಮಾರ್, ಗಿರೀಶ್ ಗಾಣಿಗ, ಸುಪ್ರೀತ್ ಇನ್ನಿತರರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ಸ್ವಾಗತಿಸಿ, ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com