ಬೈಂದೂರು: ಮತಯಂತ್ರದಲ್ಲಿ ದೋಷ. ಮರು ಮತದಾನದ ಸಾಧ್ಯತೆ ?

ಬೈಂದೂರು: ಬೈಂದೂರು ವಿಧಾನಸಭೆ ಕ್ಷೇತ್ರದ ಮತಗಟ್ಟೆ ಸಂಖ್ಯೆ 127ರಲ್ಲಿ  ಸುಮಾರು 600 ಮತದಾರರು ಮತದಾನ ಮಾಡಿದ ಬಳಿಕ ದೋಷ ಕಾಣಿಸಿಕೊಂಡಿತ್ತು. ಎಂಜಿನಿಯರ್ ಸ್ಥಳಕ್ಕೆ ತೆರಳಿ ಸರಿಪಡಿಸಿದ ಬಳಿಕ ಮತ್ತೆ 300 ಮತದಾರರು ಮತ ಚಲಾಯಿಸಿದ್ದರು. ಇಷ್ಟಾಗಿಯೂ ಮತಯಂತ್ರದ ದೋಷದ ಬಗ್ಗೆ ಎಂಜಿನಿಯರ್ ಅನುಮಾನ ವ್ಯಕ್ತಪಡಿಸಿದ್ದಾರೆ.  ಈ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಚುನಾವಣಾ ಆಯೋಗದ ಅನುಮತಿ ದೊರಕಿದ ನಂತರ ಕೆಟ್ಟು ಹೋಗಿರುವ ಮತಯಂತ್ರದ ತಪಾಸಣೆ ನಡೆಸಲಾಗುವುದು.  ಈ ವೇಳೆ ಫಲಿತಾಂಶ ಲಭ್ಯವಾಗುವುದಾದರೆ ಯಾವುದೇ ತೊಂದರೆಯಿಲ್ಲ. ಒಂದು ವೇಳೆ ಫಲಿತಾಂಶ ಲಭ್ಯವಾಗದಿದ್ದರೆ ಮರು ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ. ಆಯೋಗದ ನಿರ್ದೇಶನದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com