ರೈಲ್ವೇ ಗೇಟ್ ಮೇಲ್‍ಸೇತುವೆ ನಿರ್ಮಿಸಲು ಒತ್ತಾಯಿಸಿ ಮನವಿ

ಬೈಂದೂರು : ಬೈಂದೂರು –ಗಂಗನಾಡು ರಸ್ತೆಗೆ ಅಡ್ಡಲಾಗಿರುವ ರೈಲ್ವೇ ಗೇಟ್ ಸಂಖೇ ಐ.ಅ.73 ಯಲ್ಲಿ ದಿನದ ಹೆಚ್ಚು ಸಮಯ ಗೇಟ್ ಬಂದ್ ಆಗಿರುವುದನ್ನು ಪ್ರತಿಭಟಿಸಿ, ಅಲ್ಲಿ ಮೇಲ್ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ ಏಪ್ರಿಲ್ 25ರಂದು ಮನವಿ ನೀಡಲಾಯಿತು. ಬೈಂದೂರು ತಾಲೂಕು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ ಇಲ್ಲಿ ಗೇಟಿನಿಂದ ಆಗುತ್ತಿರುವ ತೊಂದರೆಗಳನ್ನು ರೈಲ್ವೇ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಉಡುಪಿ ಉಪವಿಭಾಗದಿಂದ ಕುಮಾರಸ್ವಾಮಿ, ಭದ್ರತಾ ವಿಭಾಗದ ಸತೀಶನ್, ಸುಬ್ರಹ್ಮಣಿ ಮೊದಲಾದವರು ಆಗಮಿಸಿದ್ದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ರೈಲ್ವೇ ಅಧಿಕಾರಿಗಳು ಜನರಿಗಾಗುತ್ತಿರುವ ಅನಾನುಕೂಲತೆಯನ್ನು ಪರಿಹರಿಸುವತ್ತ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.  ಈ ಸಂದರ್ಭದಲ್ಲಿ ಬೈಂದೂರು ರೋಟರಿ ಅಧ್ಯಕ್ಷ ಗೋವಿಂದ ಎಂ., ಸಿನಿಯರ್ ಸಿಟಿಜೆನ್ ಅಸೋಸಿಯೇಷನ್ ಅಧ್ಯಕ್ಷ ವಸಂತ ಹೆಗ್ಡೆ, ಬೈಂದೂರು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಆರ್‍ಟಿಐ ಕಾರ್ಯಕರ್ತ ರಾಘವೇಂದ್ರ, ಗ್ರಾಮ ಪಂಚಾಯತ್ ಸದಸ್ಯ ಶಂಕರ ದೇವಾಡಿಗ, ಕೃಷ್ಣ ಆಚಾರ್ ಮೊದಲಾದವರು ಉಪಸ್ಥಿತರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com