ಕಾಂಗ್ರೆಸ್ ದೇಶವನ್ನು ದುಸ್ಥಿತಿಗೆ ತಂದಿಟ್ಟಿದೆ: ಯಡಿಯೂರಪ್ಪ

ಬೈಂದೂರು: ಒಂದೆಡೆ ಚೀನಾ ಗಡಿದಾಟಿ ನಮ್ಮ ದೇಶದೆಡೆಗೆ ಬಂದಿದ್ದರೇ ಪಾಕಿಸ್ತಾನ ಅಮೇರಿಕಾದೊಂದಿಗೆ ಕೈಜೋಡಿಸಿ ನಮ್ಮೊಂದಿಗೆ ಚಲ್ಲಾಟವಾಡುತ್ತಿದೆ. ನಮ್ಮ ಸೈನಿಕರನ್ನು ಕೊಂದು ರುಂಡ ಮುಂಡ ಬೇರೆ ಮಾಡಿ ಅಪಮಾನ ಮಾಡಲಾಗುತ್ತಿದ್ದರೂ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಏನೂ ಅನ್ನಿಸಲೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೂರಿದರು
    ಚುನಾವಣಾ ಪ್ರಚಾರಕ್ಕಾಗಿ ಬೈಂದೂರು ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರನ್ನು ಭೇಟಿ ಮಾಡಿದ ಅವರು ಬೈಂದೂರು ಶ್ರೀ ಸೇನೆಶ್ವರ ದೇವಾಲಯಲ್ಲಿ ಪೂಜೆಯನ್ನು ಸಲ್ಲಿಸಿದ ಬಳಿಕ ಮಾತನಾಡಿದರು.
ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ. 21 ಶತಮಾನ ಭಾರತೀಯರ ಶತಮಾನ ಎಂದು ಪ್ರಪಂಚವೇ ನಮ್ಮತ್ತ ನೋಡುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಕಳೆದ 10 ವರ್ಷಗಳಲ್ಲಿ ದೇಶವನ್ನು ದುಸ್ಥಿತಿಗೆ ತಂದಿಟ್ಟಿದೆ. ದೇಶದ ಜನ ಬದಲಾವಣೆ ಬಯಸಿದ್ದು ನರೇಂದ್ರ ಮೋದಿ ಪ್ರಧಾನಿಯಾಬೇಕೆಂದು ಬಯಸಿದ್ದಾರೆ. ಈವರೆಗೆ ನಡೆದ ಎಲ್ಲಾ ಚುನಾವಣಾ ಸಮೀಕ್ಷೆಗಳ ಪ್ರಕಾರ ಮೋದಿ ಬಹುಮತ ಪಡೆದು ಪ್ರಧಾನಿಯಾಗುವುದು ನಿಶ್ಚಿತವಾಗಿದೆ ಎಂದರು.
      ಲೋಕಸಭೆಗೆ ಆಯ್ಕೆಯಾದ ಬಳಿಕ ಕೇಂದ್ರ ಸರಕಾರದ ಸಚಿವರುಗಳಿಂದ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನು ಜಿಲ್ಲೆ ಹಾಗೂ ಬೈಂದೂರು ಭಾಗಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆಯಿತ್ತರು.

ಒಂದೊಂದು ಕ್ಷೇತ್ರದಿಂದ ಕಮಲವನ್ನು ಕಳುಹಿಸಿದರೆ ನಾನು ಮರಳಿ ಲಕ್ಷ್ಮಿಯನ್ನು ಕಳುಹಿಸುವೆ.
    ಕರ್ನಾಟಕದ ಪ್ರತಿ ಕ್ಷೇತ್ರದಿಂದ ಕಮಲವಾಗಿ ಎಂಪಿಗಳನ್ನು ಆರಿಸಿ ಕಳುಹಿಸಿದರೆ, ಅದಕ್ಕೆ ಪ್ರತಿಯಾಗಿ ಹಣಕಾಸಿನ ಸೋರಿಕೆಯನ್ನು ತಡೆದು, ಸ್ವಿಜ್ ಬ್ಯಾಂಕ್ ನಲ್ಲಿರುವ ಲಕ್ಷಾಂತರ ಕೋಟಿ ಹಣವನ್ನು ಮರಳಿ ತಂದು ದೇಶದ ಅಭಿವೃದ್ಧಿಗೆ ಉಪಯೋಗಿಸುವುದು, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ಘೋಷಿಸುವುದು, ಬೆಳೆ ನಾಶವಾದರೆ ಪರಿಹಾರ ಒದಗಿಸಿ ಕೋಡುವುದು, ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಜನರಿಗೆ ಉದ್ಯೋಗವನ್ನು ನೀಡುವ ಮೂಲಕ ಲಕ್ಷ್ಮಿಯನ್ನು ಮರಳಿಸುವೆ ಎಂದು ನರೇಂದ್ರ ಮೋಡಿ ಭರವಸೆ ಇತ್ತಿದ್ದಾರೆ ಎಂದರು.
     ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೆಎಂಟಿಸಿ ಮಾಜಿ ಅಧ್ಯಕ್ಷ ರಾಮಕೃಷ್ಣ ಬೈಕಂಪಾಡಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಸತ್ಯರಾಜ್, ಸುರೇಶ್ ಬಿಜೂರು ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ, ಸದಾಶಿವ್ ಡಿ., ಜಯಾನಂದ ಹೋಬಳಿದಾರ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com