ಗೀತಾಗೆ ಜನರ ಸೇವೆ ಮಾಡುವ ತುಡಿತ: ವಿ.ಕೆ. ಮೋಹನ್

ಬೈಂದೂರು: ಶಿವಮೊಗ್ಗ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ತನ್ನ ತಂದೆಯ ಆಸೆಯನ್ನು ಈಡೇರಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಜನರ ಸೇವೆ ಮಾಡುವ ತುಡಿತವಿದೆ. ಅದಕ್ಕಾಗಿ ಒಂದು ಅವಕಾಶ ನೀಡಿ ಎಂದು ರಾಜ್ ಕುಮಾರ್ ಆಪ್ತ, ಉದ್ಯಮಿ ವಿ.ಕೆ. ಮೋಹನ್ ಹೇಳಿದರು. 

ಉಪ್ಪುಂದ ಶಂಕರಕಲಾ ಮಂದಿರದಲ್ಲಿ ನಡೆದ ಜೆಡಿಎಸ್ ಕಾರ‌್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಯುಪಿಎ ಸರಕಾರ ಭ್ರಷ್ಟಾಚಾರದಿಂದಾಗಿ ಒಂದು ಲಕ್ಷ ಕೋಟಿ ರೂ. ಸಂಪತನ್ನು ಲೂಟಿ ಮಾಡಿದ್ದಾರೆ. ಈಗ ಬಿಜೆಪಿಯ ಮಹಾನ್ ನಾಯಕ್ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕೇಳುವವರೇ ಇಲ್ಲ. ಬಿಜೆಪಿಗರು ವಾಜಪೇಯಿ ಹಾಗೂ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಮೋದಿ ಅಲೆ ಒಂದು ಕೃತಕ ಸೃಷ್ಟಿ. ಕೇವಲ ಮೋದಿ ಹೆಸರನ್ನೇ ಜಪಿಸಿ ಮತ ಕೇಳುತ್ತಿದ್ದಾರೆ. ಭ್ರಷ್ಟಾಚಾರಿಗಳಾದ ರಾಜ್ಯದ ಬಿಜೆಪಿ ನಾಯಕರಿಗೆ ಜನರ ಬಳಿಗೆ ಹೋಗಿ ಮತ ಕೇಳುವ ನೈತಿಕತೆ ಇಲ್ಲ. ಹಾಗಾಗಿ ಈ ಬಾರಿ ಎಲ್ಲ ವರ್ಗದ ಜನರು ಪ್ರಾದೇಶಿಕ ಪಕ್ಷಗಳ ಕಡೆಗೆ ಒಲವು ತೋರುತ್ತಿದ್ದು, ದೇಶದ ಎಲ್ಲ ಕಡೆ ಪ್ರಾದೇಶಿಕ ಪಕ್ಷಗಳು ಬಲಗೊಳ್ಳುತ್ತಿರುವುದರಿಂದ ದೇಶದಲ್ಲಿ ತೃತೀಯ ರಂಗದ ಸರಕಾರ ರಚನೆಯಾಗುವುದು ಖಚಿತ ಎಂದರು. ಬೈಂದೂರು ಬ್ಲಾಕ್ ಜೆಡಿಎಸ್ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ, ಮುಖಂಡರಾದ ರಾಜೀವ ಕೊಟ್ಯಾನ್, ಶಾಲಿನಿ ಶೆಟ್ಟಿ ಕೆಂಚನೂರು, ವೇದಾ ಹೆಗ್ಡೆ, ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಮಹಮ್ಮದ್, ಸುರಯ್ಯ ಬಾನೂ, ಸಂದೇಶ ಭಟ್, ಎನ್.ಎ. ಪೂಜಾರಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com