ಬೈಂದೂರು: ಗುಡ್ ಪ್ರೈಡೆ ಆಚರಣೆ

ಬೈಂದೂರು: ಇತಿಹಾಸದ ಸರಿಸುಮಾರು ಕ್ರಿ.ಶ. 30ನೇ ಇಸವಿಯ ಎಪ್ರಿಲ್ 7ರಂದು ಇಡೀ ಮಾನವ ಕುಲಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಕ್ರಿಸ್ತನ ಮರಣ ದಿನವನ್ನು ಆಚರಿಸುವ ಶುಭ - ಶುಕ್ರವಾರ ಅಥವಾ ಗುಡ್ ಪ್ರೈಡೆಯನ್ನು ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಶ್ರದ್ಧೆ ಮತ್ತು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.                                ಈ ಸಂದರ್ಭದಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ ಇಲ್ಲಿನ ಧರ್ಮಗುರು ರೆ.ಫಾ. ರೊನಾಲ್ಡ್ ಮಿರಾಂದ್ ರವರು ಸಮಾಜದಲ್ಲಿ ನಡೆಯುವ ಅಶಾಂತಿ, ದೌರ್ಜನ್ಯ, ಗಲಭೆ, ಭ್ರಷ್ಟಾಚಾರ ಮುಂತಾದವುಗಳಿಗೆ ನಾವೇ ಜವಾಬ್ದಾರರು. ಈ ಎಲ್ಲಾ ವಿಷಯಗಳಿಗೆ ನಾವುಗಳು ನೈತಿಕ ಹೊಣೆ ಹೊತ್ತು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುದು ನಮ್ಮೆಲ್ಲರ ಜವಾಬ್ದಾರಿ ಎಂದರು.
      ದಿವ್ಯ ಬಲಿಪೂಜೆಯ ನಂತರ ಏಸುಕ್ರಿಸ್ತನ ಅಣುಕು ಶವಯಾತ್ರೆ ಜರುಗಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com