ಸಿದ್ದಾಪುರಲ್ಲಿ ಕ್ಯಾಂಪ್ಕೋ ಶಾಖೆ ಉದ್ಘಾಟನೆ

ಸಿದ್ದಾಪುರ: ಅಡಿಕೆ ಬೆಳೆಗಾರರಿಗಾಗಿ ಕ್ಯಾಂಪ್ಕೋ ಸಂಸ್ಥೆಯು ಅನೇಕ ಅನುಕೂಲತೆಗಳನ್ನು ಮಾಡಿಕೊಟ್ಟಿದೆ. ಹಾಗೆಯೇ ಪಶ್ಚಿಮಘಟ್ಟದ ತಪ್ಪಲಿನ ಪರಿಸರದ ಅಡಿಕೆ ಬೆಳೆಗಾರರಿಗಾಗಿಯೇ ಸಿದ್ದಾಪುರದಲ್ಲಿ ಅಡಿಕೆ ಖರೀದಿ ಕೇಂದ್ರ ಇಂದು ಆರಂಭಿಸಿದ್ದೇವೆ. ಇದರಿಂದಾಗಿ ಅಡಿಕೆ ಬೆಳೆಗಾರರಿಗೆ ನೇರವಾಗಿ ಮಾರುಕಟ್ಟೆಯ ಬೆಲೆ ದೊರೆತಂತಾಗುತ್ತದೆ ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು ಹೇಳಿದರು.

ಅವರು ಸಿದ್ದಾಪುರದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಕ್ಯಾಂಪ್ಕೋ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸಿದ್ದಾಪುರದ ಅಡಿಕೆ ಖರೀದಿ ಕೇಂದ್ರದಲ್ಲಿ ವಾರದಲ್ಲಿ ಆರು ದಿನಗಳು ಅಡಿಕೆ ಖರೀದಿ ಮಾಡಲಾಗುತ್ತದೆ. ಮುಂದೆ ಇಲ್ಲಿ ಕೊಕ್ಕೋ ಹಾಗೂ ರಬ್ಬರ್‌ ಕೂಡ ಖರೀದಿ ಮಾಡಲಾಗುತ್ತದೆ. ಅಡಿಕೆ ನಿಷೇಧದ ಬಗ್ಗೆ ಸುಪ್ರೀಂಕೋರ್ಟು ಪ್ರಸ್ಥಾಪನೆ ಮಾಡಿದೆ. ಆದರೆ ಸರಕಾರ ಅಡಿಕೆ ನಿಷೇಧ ಕೈಬೀಡುವಂತೆ ಯಾವುದೆ ಕ್ರಮತೆಗೆದು ಕೊಳ್ಳಲಿಲ್ಲ. ಇದರ ಬಗ್ಗೆ ಕ್ಯಾಂಪ್ಕೋ ಸಂಸ್ಥೆಯು ಹೋರಾಟ ಮಾಡಲಿದೆ ಎಂದು ಹೇಳಿದರು.

ನಂತರ ಅಡಿಕೆ ಬೆಳೆಗಾರರೊಂದಿಗೆ ಸ್ವಂವಾದ ಕಾರ್ಯಕ್ರಮ ಜರಗಿತು.

ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಕೆ. ಸತೀಶ್ಚಂದ್ರ ಭಂಡಾರಿ, ವ್ಯವಸ್ಥಾಪಕ ನಿರ್ದೇಶಕ ಎಂ. ಸುರೇಶ್‌ ಭಂಡಾರಿ, ಸಿದ್ದಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಡಿ. ಗೋಪಾಲಕೃಷ್ಣ ಕಾಮತ್‌, ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರುಗಳಾದ ಎ. ಕಿಶೋರ್‌ ಕುಮಾರ್‌ ಕೊಡ್ಗಿ, ಸಂಜೀವ ಮಟಂದೂರು, ಡಿ.ಬಿ. ಬಾಲಕೃಷ್ಣ, ಕೆ.ಎ. ಶೆಟ್ಟಿ, ಕರುಣಾಕರನ್‌ ನಂಬಿಯಾರ್‌, ಶ್ರೀಹರಿ ಭಟ್‌ ಎಸ್‌., ಕೃಷ್ಣವೇಣಿ ಎಂ., ಎ.ಜಿ.ಎಂ. ಪ್ರಮೋದ್‌, ವ್ಯವಸ್ಥಾಪಕ ಜಿ.ಕೆ. ಗೋಪಾಲಕೃಷ್ಣ ಅರಗ, ಸಿದ್ದಾಪುರ ಶಾಖಾಧಿಕಾರಿ ನಿತೀನ್‌ ಕೊಟ್ಯಾನ್‌ ಮುಂತಾದವರು ಉಪಸ್ಥಿತರಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com