ಬೈಂದೂರು ಕ್ಷೇತ್ರ ಕಾಂಗ್ರೆಸ್ ಗೆ ಅಧಿಕ ಮತದ ಮುನ್ನಡೆ : ರಾಜು ಪೂಜಾರಿ

ಬೈಂದೂರು : ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಬೈಂದೂರು ಕ್ಷೇತ್ರದಲ್ಲಿ ಪ್ರಚಂಡ ಮುನ್ನಡೆ ಗಳಿಸಲಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಜು ಪೂಜಾರಿ ತಿಳಿಸಿದ್ದಾರೆ.  ಬಿಜೆಪಿ ನಾಯಕರು ಗೆಲುವಿನ ಕನಸು ಕಾಣುತ್ತಿದ್ದಾರೆ. ಸುಳ್ಳು ಮಾಹಿತಿ ಮೂಲಕ ಮತದಾರರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಬೈಂದೂರು ಕ್ಷೇತ್ರ ಕಾಂಗ್ರೆಸ್ ನ ಭದ್ರ ಕೋಟೆಯಾಗಿದೆ. ಶಿರೂರು, ಬೈಂದೂರು, ಖಂಬದಕೋಣೆ, ತ್ರಾಸಿ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಅಧಿಕ ಮುನ್ನಡೆ ದೊರೆಯಲಿದೆ. ಹಿಂದಿನ ಚುನಾವಣೆಯಲ್ಲಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ 31 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಕೇವಲ 10ತಿಂಗಳ ಅವಧಿಯಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಜನರ ಮುಂದಿವೆ. ಉಪ್ಪುಂದ ಮಡಿಕಲ್ ಹೊರಬಂದರು, ಕೊಡೇರಿ ಬಂದರು 33 ಕೋಟಿ ಹೆಚ್ಚುವರಿ ಅನುದಾನ, ಶಿರೂರು ಮೇಸ್ತ ಸಮುದಾಯ ಭವನಕ್ಕೆ ಈಗಾಗಲೇ 50ಲಕ್ಷ ಮಂಜೂರಾಗಿದೆ. ಹರಿಕಾಂತ ಸಮಾಜಕ್ಕೆ 1 ಕೋಟಿ ಅನುದಾನ, ಗಂಗೊಳ್ಳಿ ಬಂದರಿಗೆ 102ಕೋಟಿ ಅನುದಾನ, ಬೈಂದೂರು ಐಟಿಐ ಕಾಲೇಜು ಸ್ಥಾಪನೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ 50ಲಕ್ಷ ಅನುದಾನ, ಕುಡಿಯುವ ನೀರು, ಮರವಂತೆ ಸೇತುವೆ, ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ರಸ್ತೆಗಳು ಕಾಂಗ್ರೆಸ್ ಸಾಧನೆಯನ್ನು ಬಿಂಬಿಸುತ್ತಿದೆ. ಕ್ಷೇತ್ರವ್ಯಾಪ್ತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮನೆ ಭೇಟಿ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಪ್ರಚಾರ ನಡೆಸಿದ್ದಾರೆ. ರಾಜ್ಯ ನಾಯಕರುಗಳು, ಪಕ್ಷದ ಮುಖಂಡರು ಭೇಟಿ ನೀಡಿದ್ದಾರೆ. ಜನ ಬಿಜೆಪಿಯ ಸುಳ್ಳು ತಂತ್ರಗಾರಿಕೆಯ ಪ್ರಚಾರಕ್ಕೆ ಬೆಲೆ ನೀಡುವುದಿಲ್ಲ. ಯುವ ಸಮುದಾಯ ಕಾಂಗ್ರೆಸ್ ಬೆಂಬಲಿಸುತ್ತಿದೆ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ನ 4 ಶಾಸಕರಿದ್ದಾರೆ. ಈ ಭಾಗದಲ್ಲಿ ಜನತಾ ದಳದ ಅಸ್ತಿತ್ವ ಇಲ್ಲ ಹೀಗಾಗಿ ಬೈಂದೂರು ಕ್ಷೇತ್ರದಲ್ಲಿ 50 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಕಾಂಗ್ರೆಸ್ ಗಳಿಸಲಿದೆ ಎಂದರು.

 ಬೈಂದೂರು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎನ್ನುವ ಬಿಜೆಪಿ ಸಂಸದರು ಬೈಂದೂರು ಭಾಗಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿಲ್ಲ. ಹೀಗಾಗಿ ಅವರಿಗೆ ಜನರಲ್ಲಿ ಮತಯಾಚಿಸುವ ನೈತಿಕತೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ ಎಂದರು. ಕಾಂಗ್ರೆಸ್ ಪಕ್ಷದ ಅಧಿಕಾರವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜನಪರ ಯೋಜನೆಗಳು, ಶಾಸಕ ಕೆ. ಗೋಪಾಲ ಪೂಜಾರಿಯವರ ಅಭಿವೃದ್ಧಿ ಕಾಳಜಿಗೆ ಜನ ಬೆಂಬಲ ನೀಡುತ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಹೀಗಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಪ್ರಚಂಡ ಬಹುಮತ ಗಳಿಸುತ್ತಾರೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com