ಒಂದು ಸುಳ್ಳು ಹೇಳಿ ದರೋಡೆ ನಿಲ್ಲಿಸಿದ ಸೇಲ್ಸ್‌ಗರ್ಲ್!

ದೆಹಲಿ: ತಲೆ ಮೇಲೆ ಹೊಡೆದ ಹಾಗೆ ಸುಳ್ಳು. ಅದನ್ನೇ ಪರಮ ಸತ್ಯ ಅಂತಾ ನಂಬಲೇ ಬೇಕು. ಹಾಗೆ ಸುಳ್ಳು ಹೇಳುವ ಪರಾಕ್ರಮಿಗಳು ನಮ್ಮಲ್ಲಿದ್ದಾರೆ. ಹೀಗೆ ಸುಳ್ಳು ಹೇಳಿ ಏನು ಸಾಧಿಸುತ್ತಾರೋ ಇಲ್ಲವೋ, ದೆಹಲಿಯಲ್ಲಂತೂ ಒಂದು ದರೋಡೆ ಯತ್ನವೇ ನಿಂತು ಹೋಗಿದೆ.

ಇಲ್ಲಿನ ಚಿನ್ನಾಭರಣದ ಮಳಿಗೆ ಹರಿಓಂಗೆ ಐವರು ದರೋಡೆಕೋರರು ನುಗ್ಗಿದ್ದು, ಪಿಸ್ತೂಲ್‌ ತೋರಿಸಿ ಎಲ್ಲರನ್ನೂ ಹೆದರಿಸಿ ಸಿಬ್ಬಂದಿಯಿಂದ ಆಭರಣ ಪಡೆದಿದ್ದಾರೆ. ಹಾಗೆ ಚಿನ್ನಾಭರಣ ಗಂಟು ಮೂಟೆ ಕಟ್ಟಿ
ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಸೇಲ್ಸ್‌ ಗರ್ಲ್ ಆಗಿರುವ ಹುಡುಗಿ ಶಿಲಿಪಿ ಎಂಬಾಕೆ ನಾನು ಪೊಲೀಸರಿಗೆ ಕರೆ ಮಾಡಿದ್ದೇನೆ, ಅವ್ರು ಇನ್ನೇನು ಬಂದೇ ಬಿಟ್ರಾ.. ಅಂತಾ ಕೂಗಬೇಕೆ..? ದರೋಡೆಕೋರರಿಗೆ ಅಷ್ಟೇ ಸಾಕಾಯ್ತು.ಕೈಕಾಲು ನಡುಗಿತು. ಬದುಕಿದರೆ ಸಾಕಪ್ಪ ಅಂದು,
ಚಿನ್ನ ಎಲ್ಲಾ ಅಲ್ಲೇ ಬಿಟ್ಟರು. ಅದೇ ಕೋಪಕ್ಕೆ ಅಂಗಡಿ ಮಾಲಕನಿಗೆ ಗಾಯ ಮಾಡಿ, ಎಸ್ಕೇಪ್‌! ಅಷ್ಟಾಗಿ ಈಗ ಪೊಲೀಸರು ದರೋಡೆಕೋರರ ಬೆನ್ನತ್ತಿದ್ದಾರಂತೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com