ದಿಲ್ಲಿ ಸರಕಾರ: ಬಿಜೆಪಿಗೆ ಆಹ್ವಾನಿಸಲು ಎಎಪಿ ಕೋರಿಕೆ

ಹೊಸದಿಲ್ಲಿ: ದಿಲ್ಲಿ ಸರಕಾರ ರಚಿಸಲು ಬಿಜೆಪಿಗೆ ಮನಸ್ಸಿದ್ದರೆ ಆದರ ನಾಯಕರನ್ನು ಸರಕಾರ ರಚಿಸಲು ಆಹ್ವಾನಿಸಬೇಕು ಎಂದು ಆಮ್‌ ಆದ್ಮಿ ಪಕ್ಷ ದಿಲ್ಲಿಯ ಲೆ| ಗವರ್ನರ್‌ ನಜೀಬ್‌ ಜಂಗ್‌ ಅವರಿಗೆ ಪತ್ರ ಬರೆದು ಕೋರಿಕೊಂಡಿದೆ.

ಎಎಪಿ ನಾಯಕ ಪ್ರಶಾಂತ್‌ ಭೂಷಣ್‌ ಅವರು ದಿಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಒಂದೊಮ್ಮೆ ಬಿಜೆಪಿಗೆ ಸರಕಾರ ರಚಿಸಲು ಸಾಧ್ಯವಿಲ್ಲವೆಂದಾದರೆ ಅಥವಾ ಸರಕಾರ ರಚಿಸುವ ಮನಸ್ಸಿಲ್ಲವೆಂದಾದರೆ ಸದ್ಯಕ್ಕೆ ಅಮಾನತಿನಲ್ಲಿಡಲ್ಪಟ್ಟಿರುವ ದಿಲ್ಲಿ ವಿಧಾನ ಸಭೆಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆಗಳನ್ನು ನಡೆಸಬೇಕು ಎಂದು ಕೋರಿದ್ದಾರೆ.

ದಿಲ್ಲಿ ಜನತೆಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿಸಲ್ಪಟ್ಟ ಸರಕಾರವನ್ನು ಹೊಂದುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಎಎಪಿ ರಾಜ್ಯಪಾಲರನ್ನು ಕೋರಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com