ದಿಲ್ಲಿ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಾಧೀಶೆಯಾಗಿ ಜಸ್ಟಿಸ್ ಜಿ. ರೋಹಿಣಿ

ಹೊಸದಿಲ್ಲಿ: ಆಂಧ್ರ ಪ್ರದೇಶ ಹೈಕೋರ್ಟಿನ ನ್ಯಾಯಾಧೀಶೆ ಗೋರ್ಲಾ ರೋಹಿಣಿ ಅವರು ದಿಲ್ಲಿ ಹೈಕೋರ್ಟಿನ ಮೊತ್ತ ಮೊದಲ ಮುಖ್ಯ ನ್ಯಾಯಾಧೀಶೆಯಾಗಿದ್ದಾರೆ.
     ದಿಲ್ಲಿ ರಾಜ್ಯಪಾಲರಾಗಿರುವ ಲೆ| ಗ| ನಜೀಬ್‌ ಜಂಗ್‌ ಅವರು ದಿಲ್ಲಿ ಹೈಕೋರ್ಟಿನ ಮುಖ್ಯ ನ್ಯಾಯಾಧೀಶೆಯ ಹುದ್ದೆಗೇರಿರುವ ಜಿ. ರೋಹಿಣಿ ಅವರಿಗೆ ಸೋಮವಾರ ಪ್ರಮಾಣ ವಚನ ಬೋಧಿಸಿದರು. 
       ದಿಲ್ಲಿ ಹೈಕೋರ್ಟ್‌ 1966ರ ಅಕ್ಟೋಬರ್‌ನಲ್ಲಿ  ಸ್ಥಾಪನೆಗೊಂಡಿತ್ತು. ಅಲ್ಲಿಂದ ಈ ತನಕದ 47 ವರ್ಷಗಳ ಸುದೀರ್ಘ‌ ಅವಧಿಯಲ್ಲಿ ಈ ಉಚ್ಚ ನ್ಯಾಯಾಲಯದ ಮೊತ್ತ ಮೊದಲ ಮುಖ್ಯ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ರೋಹಿಣಿ ಅವರು ಪಾತ್ರರಾಗಿರುವರು.

ದಿಲ್ಲಿ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಎನ್‌ ವಿ ರಮಣ ಅವರು ಈ ವರ್ಷ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಹುದ್ದೆಗೆ ಪದನ್ನೋತಿ ಪಡೆದ ಪ್ರಯುಕ್ತ ತೆರವಾಗಿದ್ದ ಅವರ ಹುದ್ದೆಗೆ ಇದೀಗ ಗೋರ್ಲಾ ರೋಹಿಣಿ ಅವರು ನೇಮಕಗೊಂಡಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com