ದಿಲ್ಲಿ ಕನ್ನಡ ಸಮ್ಮೇಳನ ಅಧ್ಯಕ್ಷ ಡಾ|ಅಯ್ಯಪ್ಪನ್‌

ಉಡುಪಿ: ದಿಲ್ಲಿಯಲ್ಲಿ ಎ.5-6ರಂದು ನಡೆಯುವ 31ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಪ್ರಸಿದ್ಧ ಕೃಷಿ ವಿಜ್ಞಾನಿ, ಕೃಷಿ ಮಂತ್ರಾಲಯದ ಭಾರತೀಯ ಕೃಷಿ ಸಂಶೋಧನ ಮಂಡಳಿ ಮಹಾನಿರ್ದೇಶಕ ಡಾ|ಎಸ್‌.ಅಯ್ಯಪ್ಪನ್‌ ಆಯ್ಕೆಯಾಗಿದ್ದಾರೆ.
      'ದೆಹಲಿ ಕನ್ನಡಿಗ' ಪತ್ರಿಕೆ ಆಶ್ರಯದಲ್ಲಿ ನಡೆಯುವ ಸಮ್ಮೇಳನವನ್ನು ರಾಜ್ಯ ಮಹಿಳಾ ವಿ.ವಿ. ಕುಲಪತಿ ಡಾ|ಮೀನಾ ಚಂದಾವರ್‌ಕರ್‌ ಉದ್ಘಾಟಿಸುವರು. ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಅಧ್ಯಕ್ಷ ಎಂ.ನರೇಂದ್ರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು ಎಂದು ಸಮ್ಮೇಳನದ ಸಂಚಾಲಕ ಬಾ.ಸಾಮಗ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com