ಇಂದು ರಾಜ್‌ ಪುಣ್ಯ ತಿಥಿ

ಬೆಂಗಳೂರು:   ವರನಟ ಡಾ. ರಾಜ್‌ಕುಮಾರ್‌ರವರು ನಮ್ಮನ್ನಗಲಿ ಇಂದಿಗೆ 8 ವರ್ಷ ಸಂದಿದೆ. ಅಭಿಮಾನಿಗಳಿಗೆ ದೇವರೆ ಆದ ಅಣ್ಣಾವ್ರ  8 ನೇ ಪುಣ್ಯ ತಿಥಿ ಸ್ಮರಣೆ ಕಾರ್ಯಕ್ರಮವನ್ನು  ಇಂದು ರಾಜ್ಯಾಧ್ಯಂತ ಅಭಿಮಾನಿಗಳು ನೆರವೆರಿಸುತ್ತಿದ್ದಾರೆ. 

 ಡಾ. ರಾಜ್ ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಬೆಳಿಗ್ಗೆಯಿಂದಲೂ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿ ತಮ್ಮ ನಟ ಸೌರ್ವಭೌಮನ  ಸ್ಮರಣೆ ಮಾಡುತ್ತಿದ್ದಾರೆ.

ಈಗಾಗಲೆ ರಾಜ್‌ ಕುಮಾರ್‌ ಅವರ ಸಾವಿವಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸಿ ಡಾ. ರಾಜ್ ಸಮಾಧಿಗೆ ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.

 ಪ್ರತಿ ವರ್ಷದಂತೆ ಈ ಬಾರಿಯೂ ಅಭಿಮಾನಿಗಳು ರಕ್ತದಾನ ಹಾಗೂ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದಾರೆ.

ಡಾ. ರಾಜ್‌ಕುಮಾರ್‌ರವರ ಪತ್ನಿ ಪಾರ್ವತಮ್ಮ, ಪುತ್ರರುಗಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕುಟುಂಬ ವರ್ಗದ ಎಲ್ಲಾ ಸದಸ್ಯರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ಅಂಧರಿಗೆ ಕಣ್ಣು ಕೊಟ್ಟು ರಾಜ್‌ಕುಮಾರ್‌ ಕಣ್ಣಪ್ಪ ಆದ, ಅಭಿಮಾನಿ ದೇವರುಗಳೇ , ಎಂದು ಸಂಭೋಧಿಸುವ ಇ ಮಹಾನ್ ನಾಯಕ ನಟ ಕನ್ನಡಿಗರ ಕಣ್ಮಣಿ ಇಂದು ನಮ್ಮ ಜೊತೆ ಜೀವಂತ ವಾಗಿ ಇಲ್ಲದೆ ಇದ್ದರೂ ಅಬಾಲ ವ್ರದ್ಧರ  ಮನಸ್ಸಿನಲ್ಲಿ ಆಕರ್ಷಣೆಯ ನಟನಾಗಿ ಇಂದೀಗೂ  ಉಳಿದಿದ್ದಾರೆ..
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com