ಅಭಿವೃದ್ಧಿ ಮಾಡುವ ಬದಲು ಅಭಿವೃದ್ಧಿ ಹೊಂದಿದ್ದಾರೆ ಯಡಿಯೂರಪ್ಪ: ಮಂಜುನಾಥ ಭಂಡಾರಿ

ಬೈಂದೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತನ್ನ ಅಧಿಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮಾಡಿಲ್ಲ ಬದಲಾಗಿ ಅವರು ಅಭಿವೃದ್ಧಿ ಹೊಂದಿದ್ದಾರೆ. ವೈಯಕ್ತಿಕ ರಾಜಕಾರಣದಲ್ಲಿ ಸಾವಿರಾರು ಕೋಟಿ ಸಂಪತ್ತು ಗಳಿಸಿದ್ದಾರೆ. ಹೀಗಾಗಿ ಅವರು ಕ್ಷೇತ್ರದ ಮತದಾರರಲ್ಲಿ ತನಗಾಗಿ ಮತ ಕೇಳುತ್ತಿಲ್ಲ ಬದಲಾಗಿ ಮೋದಿಗಾಗಿ ಮತ ಕೇಳುತ್ತಿದ್ದಾರೆ. ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹೇಳಿದರು.

 ಅವರು ಬೈಂದೂರು ವ್ಯಾಪ್ತಿಯ ವಿವಿಧ ಕಡೆ ಚುನಾವಣಾ ಪ್ರಚಾರ ನಡೆಸಿ ಮಾತನಾಡುತ್ತ ಬಿಜೆಪಿ ಪಕ್ಷಕ್ಕಾಗಿ ಮತ ಕೇಳುತ್ತಿಲ್ಲ, ಮೋದಿಗಾಗಿ ಮತ ಕೇಳುತ್ತಿದ್ದಾರೆ. ಹಾಗಿದ್ದರೆ ಮೋದಿ ಏನು ಸ್ವಾತಂತ್ರ್ಯ ಹೋರಾಟಗಾರನಾ ಎಂದು ಪ್ರಶ್ನಿಸಿದರು. ನೂರಾರು ವರ್ಷದ ಕಾಂಗ್ರೆಸ್ ನ ಇತಿಹಾಸ ಜನರ ಜೊತೆಗಿನ ಬಾಂಧವ್ಯ ಹೊಂದಿದ ದೇಶವ್ಯಾಪ್ತಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳಿಗೆ ಜನ ಖಂಡಿತ ಗೌರವ ನೀಡುತ್ತಾರೆ ಎಂದರು.

 ಈ ಸಂದರ್ಭದಲ್ಲಿ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಗಾಣಿಗ, ಸಂಜೀವ ಶೆಟ್ಟಿ, ವಾಸುದೇವ ಯಡಿಯಾಳ್, ರಿಯಾಜ್ ಅಹ್ಮದ್, ಮದನ ಕುಮಾರ್ ಮುಂತಾದವರು ಹಾಜರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com