ದೇಶಕ್ಕಾಗಿ ಮತ ನೀಡಿ ಜಾತಿಗೋಸ್ಕರ ಅಲ್ಲ: ಬಿ.ಎಂ. ಸುಕುಮಾರ್ ಶೆಟ್ಟಿ

ನಾಡಾ: ಮತದಾನವು ಪ್ರಾಮುಖ್ಯವಾಗಿದ್ದು ನಾವು ನೀಡುವ ಮತ ದೇಶದ ಭವಿಷ್ಯವನ್ನು ಕಾಪಾಡುತ್ತದೆ, ನಾವು ದೇಶಕ್ಕಾಗಿ ಮತ ನೀಡಬೇಕು ಹೊರತು ಜಾತಿಗಾಗಿ ಮತ ನೀಡಬಾರದು, ದೇಶದ ವಿಚಾರಕ್ಕೆ ಬಂದರೆ ದೇಶ ಮುಖ್ಯವೇ ಹೊರತೂ ಜಾತಿಯಲ್ಲ, ನಾವು ನೀಡುವ ಸೂಕ್ತ ಮತದಿಂದ ದೇಶದ ವ್ಯವಸ್ಥೆ ಸದೃಢವಾದರೇ ಪ್ರತಿಯೊಬ್ಬ ಪ್ರಜೆಯ ಭವಿಷ್ಯವೂ ಹಸನಾಗುತ್ತದೆ ಎಂದು ಬೈಂದೂರು ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದ್ದಾರೆ.
ಅವರು ಮಂಗಳವಾರ ಸಂಜೆ ನಾಡಾದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶ ಇಂದು ಬಹಳ ಸಂಕಷ್ಟದಲ್ಲಿದ್ದು, ಆರ್ಥಿಕ ವ್ಯವಸ್ಥೆ ಕುಸಿದಿದೆ, ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಉಳಿವಿಗಾಗಿ ಹೋರಾಡುವ ಅಗತ್ಯವಿದೆ, ಇದೊಂದು ದೇವರ ಕೆಲಸವಾಗಿದೆ. ಬೈಂದೂರು ಕ್ಷೇತ್ರದಲ್ಲಿ ೩೦ ಸಾವಿರಕ್ಕೂ ಅಧಿಕ ನೂತನ ಮತದಾರರು ಸೇರ್ಪಡೆಗೊಂದಿದ್ದಾರೆ, ಅವರೆಲ್ಲರ ಮತ ಬಿಜೆಪಿಗೆ ಎನ್ನುವ ಆಶಾವಾದವಿದೆದೀ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಡಿಯೂರಪ್ಪನವರು ೫೦ ಸಾವಿರ ಮತಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಈ ಸಂದರ್ಭ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಮಾತನಾಡಿ, ಗೆಲ್ಲುವ ವಿಶ್ವಾಸ ಎಲ್ಲರಲ್ಲಿಯೂ ಇರಬೇಕು ಆದರೆ ಗೆಲ್ಲುವ ಭರವಸೆಯಿಂದ ಕೆಲಸ ಮಾಡದೇ ಕುಳಿತರೇ ಚುನಾವಣೆ ಎದುರಿಸಲು ಅಸಾಧ್ಯ. ಕಾರ್ಯಕರ್ತರು ತಳಮಟ್ಟದಿಂದ ಕೆಲಸ ಮಾಡುವ ಮೂಲಕ ಸಂಘಟಿತರಾಗಿ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವಿಗಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಸದಸ್ಯ ಬಾಬು ಹೆಗ್ಡೆ, ತಾ.ಪಂ. ಸದಸ್ಯರಾದ ಶಂಕರ ಶೆಟ್ಟಿ ಬೆಳ್ಳಾಡಿ, ಲಕ್ಷ್ಮೀ ಮೆಂಡನ್, ಎ.ಪಿ.ಎಂ.ಸಿ. ಸದಸ್ಯೆ ವಸಂತಿ ಕಾಂಚನ್, ಗ್ರಾ.ಪಂ. ಅಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com