ಯುವಕ ಮಂಡಲ ವಾರ್ಷಿಕೋತ್ಸವ

ಗಂಗೊಳ್ಳಿ: ಸ0ಘ ಸ0ಸ್ಥೆಗಳು ನಿರ0ತರವಾಗಿ ಸಮಾಜದ ಅಭಿವೃದ್ಧಿಯಲ್ಲಿ  ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಹಾಗೆ ಮಾಡಿದಾಗ ಮಾತ್ರ ಅವುಗಳು ಜನಾನುರಾಗಿಯಾಗುತ್ತವೆ. ಅರ್ಥಪೂರ್ಣವಾಗಿ ಬೆಳೆಯುತ್ತವೆ. ನಿರಂತರವಾಗಿ ಮೌಲ್ಯಯುತವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ. ಗಂಗೊಳ್ಳಿಯ ಈ ಅಂಬೇಡ್ಕರ್ ಯುವಕ ಮಡಲ ಅದಕ್ಕೊಂದು ಮಾದರಿಯಾಗಿದೆ ಎಂದು  ಬೇಳೂರು ರಾಘವೇಂದ್ರ ಶೆಟ್ಟಿ ಅವರು ಹೇಳಿದರು. ಅವರು ಮೇಲ್ ಗಂಗೊಳ್ಳಿಯ ಶಾಲಾವಠಾರದಲ್ಲಿ ನಡೆದ ಗಂಗೊಳ್ಳಿಯ ಡಾ.ಬಿ.ಆರ್ ಅ0ಬೇಡ್ಕರ್ ಯುವಕ ಮಂಡಲ (ರಿ),ಅಮೃತಾ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿ ಇವರ ವಾರ್ಷಿಕೋತ್ಸವ ಮತ್ತು ಡಾ.ಬಿ.ಆರ್ ಅ0ಬೇಡ್ಕರ್‍ರವರ 123ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಲಯನ್ ಇಬ್ರಾಹಿಂ ಸಾಹೇಬ್ ಸಂಸ್ಥೆಗಳ ಸಾಧನೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು ಕೆ. ಮಹಾಬಲ ಇವರು ಬಹುಮಾನವನ್ನು ವಿತರಿಸಿದರು. ಈ ಸ0ಧರ್ಭದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಫ್ರೌಢಶಾಲಾ ಶಿಕ್ಷಕ ಪ್ರಶಸ್ತಿ ವಿಜೇತ ಮಂಜು ಕಾಳಾವರ, ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಶಸ್ತಿ ವಿಜೇತ ಮಹಾಬಲ.ಕೆ ಮತ್ತು ಕಳೆದ ಬಾರಿಯ ಪಿ.ಯು.ಸಿ ಕಲಾವಿಭಾಗದಲ್ಲಿ ಜಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ಪ್ರಿಯಾಂಕ ಜೋಸ್ ಇವರನ್ನು ಸನ್ಮಾನಿಸಲಾಯಿತು. ಏಳರಿಂದ ಹನ್ನೆರಡನೇ ತರಗತಿವರೆಗಿನ ಕಲಿಕೆಯಲ್ಲಿ ಪ್ರಥಮ ಎರಡು ಸ್ಥಾನ ಗಳಿಸಿರುವ ಸ್ಥಳೀಯ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ಕೂಡ ನೀಡಲಾಯಿತು. ಇದೇ ಸಂಧರ್ಭದಲ್ಲಿ ಆರ್ಥಿಕವಾಗಿ ಹಿ0ದುಳಿದಿರುವ ಆರೋಗ್ಯ ಸಮಸ್ಯೆಯಿ0ದ ಬಳಲುತ್ತಿರುವ ನಿಖಿತಾ,ಸ0ತೋಷ, ಕುಷ್ಠು,ಪುಟ್ಟಣ್ಣ ಮತ್ತು ನಾಗರತ್ನರಿಗೆ ಔಷಧೋಪಚಾರಕ್ಕಾಗಿ ಸಹಾಯಧನವನ್ನು ಕೂಡ ಸಂಸ್ಥೆಗಳ ವತಿಯಿಂದ ವಿತರಿಸಲಾಯಿತು.
    ವಾರ್ಷಿಕೋತ್ಸವದ ಅಂಗವಾಗಿ ಬೈಂದೂರಿನ ಸುರೇಶ ಪೂಜಾರಿ ಇವರು ಬೆಳಗ್ಗಿನ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಯುವತಿ ಮಂಡಲದ ಅಧ್ಯಕ್ಷೆ ಕುಮಾರಿ ಸಹನಾ ಸ್ವಾಗತಿಸಿದರು. ಯುವಕ ಮಂಡಲದ ಅಧ್ಯಕ್ಷ ಸಂಪತ್ ಮತ್ತು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಭೂದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾದ ಭಾಸ್ಕರ ಎಚ್ ಜಿ ವಂದಿಸಿದರು. ಸತ್ಯನಾ ಕೊಡೇರಿ ಕಾರ್ಯಕ್ರಮವನ್ನು ನಿರೂಪಿಸಿದರು. 
ವರದಿ : ನರೇ0ದ್ರ ಎಸ್ ಗ0ಗೊಳ್ಳಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com