ತಾಲೂಕಿನ ಹಲವೆಡೆ ಗುಡುಗು ಸಹಿತ ಮಳೆ

ಕುಂದಾಪುರ: ಕುಂದಾಪುರ ತಾಲೂಕಿನಲ್ಲಿ ಶನಿವಾರ ತಡರಾತ್ರಿ ಭಾರೀ ಮಳೆಯಾಗಿದೆ. ಮಾರಣಕಟ್ಟೆ ಪರಿಸರದಲ್ಲಿ ಸುಮಾರು ಒಂದು ತಾಸು ಮಳೆ ಸುರಿದರೆ ಬೈಂದೂರು, ಆರೆಶಿರೂರು, ಹಾಲ್ಕಲ್‌,ಇಡೂರು, ಹೊಸುರು, ಆಲೂರು,ವಂಡ್ಸೆ, ಚಿತ್ತೂರು ಪರಿಸರದಲ್ಲಿ ಗುಡುಗು ಮಿಂಚಿನೊಡನೆ ಭಾರಿ ಮಳೆ ಸುರಿಯಿತು.
   ಪಶ್ಚಿಮಘಟ್ಟ ತಪ್ಪಲು ಪ್ರದೇಶಗಳಾದ ಹೊಸಂಗಡಿ, ಮಡಾಮಕ್ಕಿ, ಹಳ್ಳಿಹೊಳೆ, ಅಮಾಸೆಬೈಲುಗಳಲ್ಲಿ ರಾತ್ರಿ ಮಳೆ ಸುರಿದಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಉಳಿದಂತೆ ಅಂಪಾರು, ಕಂಡ್ಲೂರು, ಜಡ್ಕಲ್‌, ಮುದೂರುಗಳಲ್ಲಿ ಸಂಜೆಯಿಂದ ದಟ್ಟ ಮೋಡದ ವಾತಾವರಣವಿದ್ದು ರಾತ್ರಿ ಸಣ್ಣ ತಂಪೆರೆದ ಮಳೆಯಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com