ಕಲಿ-ಕಲಿಸು ಕಾರ್ಯಕ್ರಮದಲ್ಲಿ ಚಿತ್ರ ಚಿತ್ತಾರ

ತಲ್ಲೂರು: ಸರ್ವ ಶಿಕ್ಷಾ ಆಭಿಯಾನ, ಇಂಡಿಯನ್ ಫೌಂಡೇಶನ್ ಫಾರ್ ಆಟ್ರ್ಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಸಮೂಹ ಸಂಪನ್ಮೂಲ ಕೇಂದ್ರ ತಲ್ಲೂರು, ಕಲಿ-ಕಲಿಸು ಮಾದರಿ ಕ್ಲಸ್ಟರ್, ಮಾದರಿ ಶಾಲೆ ಯೋಜನೆ 2012-13, ಮಾಡೆಲ್ ಸ್ಕೂಲ್ ಇನಿಶಿಯೇಟಿವ್ ಕಾರ್ಯಕ್ರಮದನ್ವಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಲ್ಲೂರು ಇಲ್ಲಿ ನಡೆದ ಕಲಾ ಶೈಕ್ಷಣಿಕ ಸಮ್ಮೇಳನದಲ್ಲಿ ಚಿತ್ರದೊಂದಿಗೆ ಸಂಗೀತ ಸುಧೆ ಬೆರೆಸಿ ಪಠ್ಯ ವಿಷಯಗಳ ಹಾಡು ಚಿತ್ರದೊಂದಿಗೆ ಕಾರ್ಯಕ್ರಮಕ್ಕೆ ರಂಗು ನೀಡಿದರು. ಶಾಲಾ ವಿದ್ಯಾರ್ಥಿ ನಾಯಕ ಸುಬ್ರಹ್ಮಣ್ಯ ಪರಿಸರ ನಾಶ ಕುರಿತ ಚಿತ್ರ ಬಿಡಿಸಿ ಪರಿಸರದ ಕಾಳಜಿ ಬಗ್ಗೆ ಜಾಗೃತಿ ಮೂಡಿಸಿದರು. ಇದಕ್ಕೆ ಶಾಲಾ ವಿದ್ಯಾರ್ಥಿಗಳು ಸುಮಧುರ ಸಂಗೀತದೊಂದಿಗೆ ಸಹಕರಿಸಿದರು. ಚಿತ್ರಕಲಾ ಶಿಕ್ಷಕ ಕಾಳಪ್ಪ ಬಡಿಗೇರ್ ಆಕಾಶವಾಣಿ ಸಂಗೀತ ಕಲಾವಿದ ಗಣೇಶ್‍ಕುಮಾರ್ ಗಂಗೊಳ್ಳಿ ಮಾರ್ಗದರ್ಶನ ನೀಡಿದರು. ಶಿಕ್ಷಕರಾದ ಕುಪ್ಪಯ್ಯ ಮರಾಠಿ, ಶಿಕ್ಷಕರಾದ ರಮೇಶ್ ಸಹಕರಿಸಿದರು. .ಸಮೂಹ ಸಂಪನ್ಮೂಲ ವ್ಯಕ್ತಿ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.






ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com