ರಾ. ಆಂತರಿಕ ಭದ್ರತಾ ಸಲಹೆಗಾರ ವಿಜಯಕುಮಾರ್‌ ಕೊಲ್ಲೂರು ಭೇಟಿ

ಕೊಲ್ಲೂರು : ಕುಖ್ಯಾತ ನರಹಂತಕ, ಕಾಡುಗಳ್ಳ ವೀರಪ್ಪನ್‌ ಅಟ್ಟಹಾಸವನ್ನು ಮಟ್ಟಹಾಕಿ ಆತನನ್ನು ಹತ್ಯೆಗೈಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಜಿಪಿ ವಿಜಯಕುಮಾರ್‌ ಮಂಗಳವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಪ್ರಸ್ತುತ ರಾಷ್ಟ್ರೀಯ ಆಂತರಿಕ ಭದ್ರತಾ ಸಲಹೆಗಾರರಾಗಿರುವ ವಿಜಯಕುಮಾರ್‌ ಅವರಿಗೆ ಝಡ್‌ ಶ್ರೇಣಿಯ ಭದ್ರತೆ ಇದ್ದು, ಅವರ ಭೇಟಿ ಸಂದರ್ಭ ಭಕ್ತರಿಗೆ ಹಾಗೂ ಮಾಧ್ಯಮಗಳಿಗೆ ಕೂಡ ಪ್ರವೇಶ ನಿರಾಕರಿಸಲಾಗಿತ್ತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com