ಕಿರ್ಣಾಂ ಸುರ್ಯಾಚಿಂ - ಕೊಂಕಣಿ ಭಕ್ತಿಗೀತೆ ದ್ವನಿಸುರುಳಿ ಬಿಡುಗಡೆ


ಇಸ್ರಾಯೆಲ್: ಈಸ್ಟರ್ ಹಬ್ಬ ದಿನದಂದು ಇಲ್ಲಿನ ತೆಲ್ ಆವಿವ್ ನ ತೆರ್ರೆಸಂತ ಶಾಲಾ ಮೈದಾನದಲ್ಲಿ ಈಸ್ಟರ್ ಹಬ್ಬದ ಪವಿತ್ರ ಬಲಿ ಪೂಜೆಯ ನಂತರ ಶ್ರೀ ಸಂತೊಷ್ ಫೆರ್ನಾಂಡಿಸ್ ರವರ ಕೊಂಕಣಿ ಭಕ್ತಿ ಗೀತೆಗಳ ದ್ವನಿಸುರುಳಿ "ಕಿರ್ಣಾಂ ಸುರ್ಯಾಚಿಂ"ಯನ್ನು 'ಇಂಡಿಯನ್ ಚಾಪ್ಲಿನ್ಸಿಯ ಚಾಪ್ಲಿನ್' ರವರಾದ ಧರ್ಮಗುರು ಪಾ| ತೊಜಿ ಜೊಸ್ ಬಿಡುಗಡೆ ಮಾಡಿದರು.

  ಈ ಸಂದರ್ಭದಲ್ಲಿ  ಪಾ| ವಿಕ್ಟರ್ ಡಿ'ಸೋಜಾ, ಪಾ|ಧರ್ಮ, ಪಾ|ರವಿ ರೊಸಾರಿಯೊ, ಬ್ರದರ್ ಅರ್ಕಡಿಯೊಸ್, ಬ್ರದರ್ ಕಾರ್ಮೆಲ್ ಮಿರ್ತೊಂಗ್, ಬ್ರದರ್ ಜೇಮ್ಸ್ ರಾಜ್,ಬ್ರದರ್ ಪ್ರವೀನ್ ತೊಪ್ನೊ ಹಾಗೂ ಸಾವಿರಾರು ಸಂಖೆಯಾಲ್ಲಿ ಭಕ್ತಾದಿಗಳು ಹಾಜರಿದ್ದರು. ಹಲವಾರು ದಿನಗಳಿಂದ ಕೊಂಕಣಿ ಬಾಂದವರು ಆತುರದಿಂದ ನಿರಿಕ್ಷಿಸುತ್ತಿದ್ದ ಇ ದ್ವನಿ ಸುರುಳಿಗೆ ಅರ್ಥ ಭರಿತ ಹಾಗು ಧಾರ್ಮಿಕತೆಯಿಂದ ಕೂಡಿದ ಅದ್ಬುತ ಸಾಹಿತ್ಯವನ್ನು ಅತೀ ವಂದನೀಯ ಧರ್ಮಗುರು ವಲೆರೀಯನ್ ಮೆಂಡೊನ್ಸರವರು ಬರೆದಿದ್ದಾರೆ. ಪ್ರಸಿದ್ಧ ಸಂಗೀತಕಾರರಾದ ದೀಪಕ್ ಜಯಶೀಲಾನ್ ಸಂಗೀತ ಒದಗಿಸಿದ್ದಾರೆ . ಹೆಸರಾಂತ ಹಿನ್ನೆಲೆ ಗಾಯಕಿ ಅನುರಾಧ ಭಟ್ ಅವರ ಸುಮಧುರ ದ್ವನಿಯು ಸೊಮಿಯಾ ಜೆಜು ಮ್ಹಜ್ಯಾ ಈ ಭಕ್ತಿಗೀತೆಗಿದೆ .
     ರಾಗ ಸಂಯೊಜನೆಯನ್ನು ಕೊಂಕಣಿ ಕವಿ, ಲೇಖಕರಾದ ಸಂತೋಷ್ ಫೆರ್ನಾಂಡಿಸ್ ಕುಂದಾಪುರ ನೀಡಿ ಹಾಡಿದ್ದಾರೆ. ಉತ್ತಮ ಗಾಯಕರಾದ ಸಂತೊಷ್ ಫೆರ್ನಾಂಡಿಸ್ ರವರು ಹಲವಾರು ವರುಷಗಳಿಂದ  ಚರ್ಚ್ ಗಾಯನ ಮಂಡಲಿಯಲ್ಲಿ ಭಕ್ತಿ ಗೀತೆಗಳನ್ನು ಹಾಡುತ್ತಿದ್ದು ಪ್ರಸ್ತುತ ಇಸ್ರಾಯೆಲ್ ನಲ್ಲಿನ ಕೊಂಕಣಿ ಗಾಯನ ಮಂಡಲಿಯನ್ನು ಮುನ್ನಡೆಸುತ್ತಿದ್ದಾರೆ. ಕೊಂಕಣಿ ಭಕ್ತಿ ಗೀತೆ ದ್ವನಿ ಸುರುಳಿಯು ಎಲ್ಲಾ ಕೊಂಕಣಿ ದ್ವನಿಸುರುಳಿ ಮಾರಟ ಕೇಂದ್ರಗಳಲ್ಲಿ ಲಭ್ಯವಿದೆ ಎಂದು ಸಂತೋಷ್ ತಿಳಿಸಿದ್ದಾರೆ.

ವರದಿ: ಲೆನಾರ್ಡ್ ಫೆರ್ನಾಂಡಿಸ್
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com