ಕುಂದಾಪುರದಲ್ಲಿ ಬಿಜೆಪಿ ಪಾದಯಾತ್ರೆಗೆ ಕಾಂಗ್ರೆಸ್‌ ಬೈಕ್‌ ಜಾಥಾ ಎದುರು

ಕುಂದಾಪುರ: ಶಾಸ್ತ್ರಿ ವೃತ್ತದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕಾರ್ಯಕರ್ತರೊಂದಿಗೆ ನಗರದಲ್ಲಿ ಮತಯಾಚನೆ ಮಾಡಲು ಪಾದಯಾತ್ರೆ ಕಾರ್ಯಕ್ರಮ ನಿಗದಿಯಾಗಿತ್ತು. ಕಾರ್ಯಕರ್ತರು ಶೋಭಾ ಬರುವುದನ್ನೇ ಕಾಯುತ್ತಾ ಕುಳಿತಿದ್ದರು. 
     ಅದೇ ವೇಳೆಗೆ ಜಪ್ತಿ ಕಡೆಯಿಂದ ಕುಂದಾಪುರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರ ಪರವಾಗಿ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಬೈಕ್‌ ಜಾಥಾ ನಗರವನ್ನು ಪ್ರವೇಶಿಸಿತು. ಬಿಜೆಪಿ - ಕಾಂಗ್ರೆಸ್‌ ಕಾರ್ಯಕರ್ತರು ಮುಖಾಮುಖೀಯಾದಾಗ ಅಲ್ಲಿನ ವಾತಾವರಣ ಬಿಸಿಯೇರಿತು.
   ಒಂದೆಡೆ ಬಿಜೆಪಿ ಕಾರ್ಯಕರ್ತರ ಜಯಘೋಷ, ಇನ್ನೊಂದೆಡೆ ಕಾಂಗ್ರೆಸ್‌ ಕಾರ್ಯಕರ್ತರ ಬೈಕ್‌ಗಳ ಗರ್ಜನೆ, ಜಯಕಾರದಿಂದಾಗಿ ಒಟ್ಟಾರೆ ಒಂದು ಹತ್ತು ನಿಮಿಷ ಉಸಿರು ಬಿಗಿ ಹಿಡಿದುಕೊಂಡ ಅನುಭವ ಇಲ್ಲಿ ನೆರೆದವರಿಗಾಯಿತು.

   ಈ ಸಂದರ್ಭ ಸ್ವತಃ ಕುಂದಾಪುರ ಡಿವೈಎಸ್‌ಪಿ ಎಸ್‌.ಪಿ. ಪಾಟೀಲ್‌ ಹಾಗೂ ವೃತ್ತ ನಿರೀಕ್ಷಕ ದಿವಾಕರ್‌ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಇದ್ದುದರಿಂದ ಯಾವುದೇ ಗಲಾಟೆಗೆ ಅವಕಾಶವಾಗಲಿಲ್ಲ. ಮೆರವಣಿಗೆಯನ್ನು ಸುಸೂತ್ರವಾಗಿ ಮುಂದೆ ಹೋಗುವಂತೆ ನೋಡಿಕೊಂಡರು.

ಶಾಸ್ತ್ರಿ ವೃತ್ತದ ಬಳಿ ಸುಮಾರು ಹದಿನೈದು ನಿಮಿಷ ಕಾಲ ರಾ.ಹೆ.ಯಲ್ಲಿ ಸಂಚರಿಸುವ ಹಾಗೂ ನಗರದ ಒಳಗೆ ಪ್ರವೇಶಿಸುವ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com