ಧ್ವಂಧ್ವ ನೀತಿಯ ರಾಜಕಾರಣಿಗಳ ನಡವಳಿಕೆಯಿಂದ ಬೇಸತ್ತ ಮತದಾರರು ಜೆಡಿಎಸ್‌ ಅತ್ತ

ಕುಂದಾಪುರ: ಧ್ವಂಧ್ವ ನೀತಿಯ ರಾಜಕಾರಣಿಗಳ ನಡವಳಿಕೆಯಿಂದ ಬೇಸತ್ತ ಮತದಾರರು ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆ ಸಮರ್ಥ ನಾಯಕತ್ವ ಗುಣದ ಅಭ್ಯರ್ಥಿಗಳನ್ನು ಆಯ್ದುಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಜೆಡಿಎಸ್‌ನಿಂದ ಬೈಂದೂರು-ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೀತಾ ಶಿವರಾಜ್‌ ಕುಮಾರ್‌ ಅವರತ್ತ ಸಾಗುತ್ತಿರುವುದು ಪ್ರಜ್ಞಾವಂತ ಮತದಾರರ ಉತ್ತಮ ಭವಿಷ್ಯ ರೂಪಿಸುವ ಹೊಸ ಆಯಾಮವಾಗಿದೆ ಎಂದು ಉದ್ಯಮಿ ವಿ.ಕೆ. ಮೋಹನ್‌ ಹೇಳಿದ್ದಾರೆ.
      ಅವರು ಆಜ್ರಿ, ಕೆರಾಡಿ, ಕಬ್ಬಿನಾಲೆ ಪರಿಸರದಲ್ಲಿ ಜೆಡಿಎಸ್‌ ಪರ ಮತ ಯಾಚನೆಗೆ ಮನೆ ಮನೆಗೆ ತೆರಳಿದ ಸಂದರ್ಭದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
    ಜೆಡಿಎಸ್‌ ಕುಂದಾಪುರ ಕ್ಷೇತ್ರ ಅಧ್ಯಕ್ಷ ರಾಜೀವ್‌ ಕೋಟ್ಯಾನ್‌ ಅವರು ಬಂಗಾರಪ್ಪನವರ ಜನಪರ ಕಾಳಜಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಪಾರದರ್ಶಕತೆಯ ಆಡಳಿತ ಹಾಗೂ ಜಾತ್ಯಾತೀತ ನಿಲುವಿನ ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರ ಕರ್ತವ್ಯ ನಿಷ್ಠೆ ಹಾಗೂ ಆರ್ಥಿಕ ದುರ್ಬಲರ ಬಗ್ಗೆ ಇರುವ ಕಾಳಜಿ ಬಗ್ಗೆ ಮತದಾರರಲ್ಲಿ ಮನವರಿಕೆ ಮಾಡಿದರು.
     ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್‌ ಅಧ್ಯಕ್ಷ ರಂಜಿತ್‌ ಕುಮಾರ್‌ ಶೆಟ್ಟಿ, ಜೆಡಿಎಸ್‌ ಮುಖಂಡರಾದ ಜಗದೀಶ್‌ ಯಡಿಯಾಳ, ಚಿಟ್ಟೆ ರಾಜಗೋಪಾಲ ಹೆಗ್ಡೆ, ನಾಗರಾಜ ನಾಯ್ಕ, ಸದಾನಂದ ಕಾಂಚನ್‌, ಕಿಶೋರ್‌ ಕುಮಾರ್‌ ಬಲ್ಲಾಳ್‌, ಮನ್ಸೂರ್‌ ಮುಂತಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com