ನಾಗಪ್ಪಯ್ಯ ಹೆಬ್ಟಾರ್‌ ಮನೆ ಮೇಲೆ ದಾಳಿ: ಬ್ರಾಹ್ಮಣ ಪರಿಷತ್‌ ಖಂಡನೆ

ಕುಂದಾಪುರ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಕ್ರಮ ಮದ್ಯ ದಾಸ್ತಾನು ಮಾಡಿದ್ದಾರೆ ಎಂದು ಸುಳ್ಳು ಕಾರಣ ನೀಡಿ ಸಮಾಜದ ಹಿರಿಯರೂ ನಿವೃತ್ತ ಶಿಕ್ಷಕರಾದ ಗೋಪಾಡಿಯ ನಾಗಪ್ಪಯ್ಯ ಹೆಬ್ಟಾರ್‌ ಅವರ ಮನೆಯ ಮೇಲೆ ದಾಳಿ ಮಾಡಿ ಅವರಿಗೆ ಸರಕಾರಿ ವ್ಯವಸ್ಥೆಯ ಮೂಲಕ ಕಿರುಕುಳ ನೀಡಿ ಮಾನಸಿಕ ಆಘಾತವನ್ನು ನೀಡಿರುವುದದನ್ನು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್‌ ಖಂಡಿಸಿದೆ.

ಈ ವೃದ್ಧ ದಂಪತಿಗೆ ಆಗಿರುವ ಮಾನಸಿಕ ಆಘಾತ ಹಾಗೂ ಮಾನಹಾನಿ ತುಂಬಿ ಕೊಡುವವರು ಯಾರು?. ಇಂತಹ ಕೃತ್ಯ ನಡೆಸಿದ ವ್ಯಕ್ತಿಗಳ ವಿರುದ್ಧ ಬ್ರಾಹ್ಮಣ ಸಮಾಜ ಒಗ್ಗೂಡಿ ನಿಂತು ಬಲವಾಗಿ ಖಂಡಿಸುತ್ತದೆ ಅಧ್ಯಕ್ಷ ಕೆ.ಶ್ರೀನಿವಾಸ ಹೆಬ್ಟಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com