ಮೋದಿ ಮುಸ್ಲಿಂ ವಿರೋಧಿಯಲ್ಲ: ಅಬ್ದುಲ್ ಮುತ್ತಾಲಿ

ಬೈಂದೂರು : ಗುಜರಾತಿನ ವಡೋದರಾದಿಂದ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ನರೇಂದ್ರ ಮೋದಿ ಅವರನ್ನು ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಗುಜರಾತಿನ ಮುಸ್ಲಿಂ ಬಾಂಧವರು ಹೃತ್ಪೂರ್ವಕವಾಗಿ ಸ್ವಾಗತಿಸಿ, ಶುಭ ಹಾರೈಸಿದ್ದನ್ನು ಇಡೀ ದೇಶವೇ ಮಾಧ್ಯಮಗಳಲ್ಲಿ ನೋಡಿದೆ. ಮೋದಿಯವರು ಯಾವತ್ತೂ ಮುಸ್ಲಿಂ ವಿರೋಧಿಯಾಗಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಸಿ.ಎಚ್. ಅಬ್ದುಲ್ ಮುತ್ತಾಲಿ ಹೇಳಿದ್ದಾರೆ. 

ಅವರು ಬೈಂದೂರು ಕ್ಷೇತ್ರದ ಚಿತ್ತೂರು, ವಂಡ್ಸೆ, ಗುಲ್ವಾಡಿ ಪರಿಸರದಲ್ಲಿ ಶಿವಮೊಗ್ಗ ಲೋಕಸಭೆ ಅಭ್ಯರ್ಥಿ ಯಡಿಯೂರಪ್ಪ ಪರವಾಗಿ ಮಾತನಾಡಿದರು. ಇತರ ಪಕ್ಷದ ಕೆಲವು ಮುಖಂಡರು ಮೋದಿಯವರನ್ನು ವೃಥಾ ಮುಸ್ಲಿಂ ವಿರೋಧಿಯಂತೆ ಬಿಂಬಿಸಿ ಹೇಳಿಕೆ ನೀಡುತ್ತಾ ಬಂದಿರುವುದು ಸರಿಯಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಿಜೆಪಿ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಈ ಹಿಂದಿನಿಂದಲೂ ನಡೆಸುತ್ತಾ ಬಂದಿದೆ ಎಂದರು. ಬೈಂದೂರು ಕ್ಷೇತ್ರ ಅಲ್ಪಸಂಖ್ಯಾತ ಘಟಕ ಕಾರ್ಯದರ್ಶಿ ಹಬೀಬುಲ್ಲ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

1 comments:

Anonymous said...

Who is this Abdul Mutalik,??? Is he a relative of Pramod MUTALIK ???/

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com